‘ಮ್ಯಾಕ್ಸ್​​’ನಲ್ಲಿನ ನಟನೆಗೆ ಕಿಚ್ಚ ಸುದೀಪರನ್ನು ಹೊಗಳಿದ ಟಾಲಿವುಡ್ ನಿರ್ದೇಶಕ​​; ಟ್ಯಾಲೆಂಟೆಡ್​ ಡೈರೆಕ್ಟರ್ ರಾಜಮೌಳಿ ಹೇಳಿದಿಷ್ಟು.. | Kiccha Sudeepa

Untitled design (69)
Published on

ಹೈದರಾಬಾದ್​​: ಟಾಲಿವುಡ್​​ ಟ್ಯಾಲೆಂಟೆಡ್​ ನಿರ್ದೇಶಕ ಎಸ್​.ಎಸ್​ ರಾಜಮೌಳಿ(SS Rajamouli) ಅವರ ಕುರಿತು ಹೊಸದಾಗಿ ಪರಿಚಯಿಸುವ ಅಗತ್ಯ ಇಲ್ಲ. ಆರ್‌ಆರ್‌ಆರ್ ಮತ್ತು ಬಾಹುಬಲಿಯಂತಹ ಬ್ಲಾಕ್‌ಬಸ್ಟರ್ ಪ್ಯಾನ್​ ಇಂಡಿಯಾ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಈ ಹೆಸರಾಂತ ನಿರ್ದೇಶಕ ರಾಜಮೌಳಿ ಅವರು ಕಿಚ್ಚ ಸುದೀಪ್​(Kiccha Sudeepa) ಅವರನ್ನು ಹೊಗಳಿದ್ದಾರೆ.

ಇತ್ತೀಚೆಗೆ ತೆರೆಕಂಡ ಮ್ಯಾಕ್ಸ್ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್​ ಅವರ ನಟನೆಯನ್ನು ಹೊಗಳಿರುವ ಅವರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಕಿಚ್ಚ ಸುದೀಪ ಅವರ ಕೌಶಲ ಮತ್ತು ಸ್ಟಾರ್‌ಡಮ್ ಅನ್ನು ಶ್ಲಾಘಿಸಿದ್ದಾರೆ. ಅವರ ಬ್ಲಾಕ್‌ಬಸ್ಟರ್ ಯಶಸ್ಸಿಗಾಗಿ #MaxTheMovie ಯ ಕಿಚ್ಚ ಸುದೀಪ ಮತ್ತು ತಂಡಕ್ಕೆ ಅಭಿನಂದನೆಗಳು. ನಿಮ್ಮ ಸ್ಟಾರ್‌ಡಮ್‌ನೊಂದಿಗೆ ಮಾಸ್ ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದಿದ್ದಾರೆ. ಅಲ್ಲದೆ ಸಿನಿಮಾ ನೋಡಲು ಸಮಯ ಸಿಕ್ಕಿಲ್ಲ. ಆದರೆ ಶೀಘ್ರದಲ್ಲೇ ನಾನು ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಆ್ಯಕ್ಷನ್​​​​ ಥ್ರಿಲ್ಲರ್​​ ಕನ್ನಡ ಸಿನಿಮಾ ಮ್ಯಾಕ್ಸ್​​​​ ಅನ್ನು ವಿಜಯ್​ ಕಾರ್ತಿಕೇಯ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ, ಸುನೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮ್ಯಾಕ್ಸ್​ ಸಿನಿಮಾವನ್ನು ಕ್ರಿಸ್​​ಮಸ್​​​ನಲ್ಲಿ ಬಿಡುಗಡೆ ಮಾಡಲಾಯಿತು. ಎಸ್​.ಎಸ್​. ರಾಜಮೌಳಿ ಪ್ರಸ್ತುತ ತಮ್ಮ ಮುಂದಿನ ಸಿನಿಮಾ SSMB29 ನಲ್ಲಿ ನಿರತರಾಗಿದ್ದಾರೆ. ಸೌತ್ ಸೂಪರ್​​ಸ್ಟಾರ್ ಮಹೇಶ್ ಬಾಬು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net