ಮೋದಿ ಮೈದಾನದತ್ತ ಪ್ರಧಾನಿ: ಅಂತಿಮ ಹಣಾಹಣಿಯ ಅಂತ್ಯದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶ

PM Modi
Published on

ಬೆಂಗಳೂರು: ಏಕದಿನ ವಿಶ್ವಕಪ್ ಕ್ರಿಕೆಟ್​ ಪಂದ್ಯಾವಳಿಯ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಅಂತಿಮ ಹಣಾಹಣಿ ನಡೆಯತ್ತಿದ್ದು, ಇದೀಗ ಅಲ್ಲಿಗೆ ಪ್ರಧಾನಿ ಮೋದಿ ತೆರಳುತ್ತಿದ್ದಾರೆ. ಪಂದ್ಯ ಇನ್ನೂ ಏನು ಎಂದು ಹೇಳಲಾಗದ ಸ್ಥಿತಿಯಲ್ಲಿ ಕುತೂಹಲ ಕೆರಳಿಸಿರುವ ನಡುವೆಯೇ ಅವರು ಅಲ್ಲಿಗೆ ತೆರಳಿದ್ದಾರೆ.

ಅಹಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿನ ಇಂದಿನ ಫೈನಲ್​ ಸೆಣಸಾಟವನ್ನು ಪ್ರಧಾನ ಮಂತ್ರಿ ವೀಕ್ಷಿಸುತ್ತಾರೆ ಎನ್ನಲಾಗಿದ್ದು, ಅದೀಗ ನಿಜವಾಗಿದೆ. ಒಟ್ಟಿನಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಅನೇಕರು ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಇನ್ನೊಂದೆಡೆ ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲಸ್ ಈಗಾಗಲೇ ಮೈದಾನಕ್ಕೆ ತೆರಳಿದ್ದು, ಬಹುತೇಕ ಆರಂಭದಿಂದಲೇ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾ 3 ವಿಕೆಟ್​ಗಳ ನಷ್ಟದಲ್ಲಿ 200ಕ್ಕೂ ಅಧಿಕ ರನ್​ ಗಳಿಸಿ 240ರ ಗುರಿಯ ಸಮೀಪದಲ್ಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net