More

    ವಿಶ್ವಕಪ್ ಫೈನಲ್​: ಒಂದೆಡೆ ಕೂಗು, ಹುರಿದುಂಬಿಸೋ ಜೈಕಾರ, ಇನ್ನೊಂದೆಡೆ ಸದ್ದಡಗಿಸೋ ಹುನ್ನಾರ: ಗೆಲ್ಲೋರು ಯಾರು?

    ಬೆಂಗಳೂರು: ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್​ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಭಯಂಕರ ಆಟ ನಡೆಯುತ್ತಿದ್ದು, ಇದು ರೋಚಕ ಹಂತವನ್ನು ತಲುಪುವ ಸಾಧ್ಯತೆಗಳು ಕಾಣಿಸುತ್ತಿವೆ.

    ಮೊದಲ ಇನ್ನಿಂಗ್ಸ್​ ಇನ್ನೇನು ಮುಗಿದಿದ್ದು, ಭಾರತ ಈಗಾಗಲೇ ಎಲ್ಲ ವಿಕೆಟ್​ಗಳ ನಷ್ಟದಲ್ಲಿ 240 ರನ್ ಗಳಿಸಿದೆ. ಹೀಗಾಗಿ ಎರಡನೇ ಇನ್ನಿಂಗ್ಸ್ ರೋಚಕ ಅನುಭವ ನೀಡುವ ಲಕ್ಷಣಗಳು ಗೋಚರಿಸುತ್ತಿದ್ದು, ಗೆಲ್ಲುವವರು ಯಾರು? ಎಂಬ ಕುರಿತು ಕುತೂಹಲ ಕೆರಳಲಾರಂಭಿಸಿದೆ.

    ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಕುರಿತು ಪ್ರಧಾನಿ ಮೋದಿ ಈಗಾಗಲೇ ಶುಭ ಹಾರೈಸಿದ್ದು, ಇನ್ನೇನು ಕ್ರೀಡಾಂಗಣಕ್ಕೂ ಬಂದು ವೀಕ್ಷಿಸಲಿದ್ದಾರೆ ಎನ್ನಲಾಗಿದೆ. 140 ಕೋಟಿ ಜನರು ನಿಮ್ಮ ಗೆಲುವಿಗಾಗಿ ಕೂಗಿ ಹುರಿದುಂಬಿಸುತ್ತಿದ್ದಾರೆ. ಆಲ್ ದ ಬೆಸ್ಟ್ ಟೀಮ್ ಇಂಡಿಯಾ ಎಂದು ಮೋದಿ ಹಾರೈಸಿದ್ದಾರೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಅಹಮದಾಬಾದ್​ನ ಈ ಕ್ರೀಡಾಂಗಣದಲ್ಲಿ ಲಕ್ಷಕ್ಕೂ ಅಧಿಕ ಕ್ರೀಡಾಭಿಮಾನಿಗಳು ವಿವಿಧ ಘೋಷಣೆಗಳನ್ನು ಕೂಗಿ ಹುರಿದುಂಬಿಸುತ್ತಿದ್ದಾರೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆ ಕೂಡ ಗಮನ ಸೆಳೆದಿದೆ. ಎದುರಾಳಿ ತಂಡದ ಆಟಗಾರನಾದ ನನಗೆ ತುಂಬಾ ತೃಪ್ತಿ ಕೊಡುವುದೆಂದರೆ ದೊಡ್ಡ ಜನಸಮೂಹವನ್ನು ಮೌನವಾಗಿಸುವುದು, ಅದೇ ನನ್ನ ನಾಳೆಯ ಗುರಿ ಎಂದಿದ್ದರು.

    ಹೀಗಾಗಿ ಲಕ್ಷಾಂತರ ಕ್ರೀಡಾಭಿಮಾನಿಗಳ ಕೂಗಿನ ನಡುವೆಯೇ ಎರಡನೇ ಇನ್ನಿಂಗ್ಸ್​ ಆರಂಭವಾಗುತ್ತಿದ್ದು, ಗೆಲ್ಲುವುದು ಹುರಿದುಂಬಿಸೋ ಜೈಕಾರವೋ ಅಥವಾ ಸದ್ದಡಗಿಸೋ ಹುನ್ನಾರವೋ ಎಂಬ ಕೌತುಕ ಉಂಟಾಗಿದೆ.

    ಭಾರತವೇ ಗೆಲ್ಲೋದು!: ಇದೇನಿದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ?

    ವಿಶ್ವಕಪ್ ಗೆಲ್ಲುವುದು ಹೇಗೆ?: ಭಾರತದ ಕ್ರಿಕೆಟ್ ತಂಡಕ್ಕೆ ಸದ್ಗುರು ನೀಡಿದ ಸಲಹೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts