More

    ಭಾರತವೇ ಗೆಲ್ಲೋದು!: ಇದೇನಿದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ?

    ಬೆಂಗಳೂರು: ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್​ನ ಫೈನಲ್ ಪಂದ್ಯಾವಳಿ ದೇಶವನ್ನೇ ಕುತೂಹಲದಲ್ಲಿ ಇರಿಸಿದ್ದು, ಕ್ಷಣಕ್ಷಣಕ್ಕೂ ರೋಚಕ ಎನಿಸುತ್ತ ಹೋಗುತ್ತಿದೆ.

    ಈಗಾಗಲೇ ಭಾರತ 5 ವಿಕೆಟ್​ಗಳನ್ನು ಕಳೆದುಕೊಂಡಿರುವುದರಿಂದ ಒಂದಷ್ಟು ಆತಂಕ ಉಂಟಾಗಿದ್ದರೂ, ವಿಶ್ವ ಪುರುಷರ ದಿನದಂದೇ ನಡೆಯುತ್ತಿರುವ ಈ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್​ ಪಂದ್ಯದಲ್ಲಿ ಭಾರತೀಯ ಆಟಗಾರರು ಪೌರುಷ ಮೆರೆಯಲಿದ್ದಾರೆ, ಮೋದಿ ಮೈದಾನದಲ್ಲಿ ಕ್ರಿಕೆಟ್ ಮೋಡಿ ನಡೆಯಲಿದೆ ಎಂಬ ನಿರೀಕ್ಷೆಯೊಂದಿಗೇ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಮತ್ತೊಂದೆಡೆ ಭಾರತವೇ ಗೆಲ್ಲಲಿದೆ ಎಂಬ ವಿಶ್ವಾಸ ತೋರುತ್ತಿರುವ ಕ್ರೀಡಾಭಿಮಾನಿಗಳು ಅದಕ್ಕೆ ಪೂರಕ ಎಂಬಂತೆ ಲೆಕ್ಕಾಚಾರವನ್ನೂ ಹಾಕುತ್ತಿದ್ದಾರೆ. ಕಳೆದ 12 ವಿಶ್ವಕಪ್ ಪಂದ್ಯಗಳಲ್ಲಿ ಟಾಸ್​ ಗೆದ್ದ ತಂಡ 4 ಸಲ ಗೆದ್ದಿತ್ತು, ಅರ್ಥಾತ್​ ಟಾಸ್ ಸೋತ ತಂಡ 8 ಸಲ ಗೆದ್ದಿತ್ತು. ಅದರಲ್ಲೂ ಭಾರತ ವಿಶ್ವಕಪ್ ಗೆದ್ದಿದ್ದ ಎರಡೂ ಪಂದ್ಯಗಳಲ್ಲಿ ಅದು ಟಾಸ್ ಸೋತಿತ್ತು. ಹೀಗಾಗಿ ಈ ಸಲ ಟಾಸ್​ ಗೆದ್ದ ಭಾರತವೇ ಕಪ್ ಗೆಲ್ಲಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.

    ವಿಶ್ವಕಪ್ ಗೆಲ್ಲುವುದು ಹೇಗೆ?: ಭಾರತದ ಕ್ರಿಕೆಟ್ ತಂಡಕ್ಕೆ ಸದ್ಗುರು ನೀಡಿದ ಸಲಹೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts