'ಗೆಲುವು-ಸೋಲು ಜೀವನದ ಭಾಗ' - ಹಾಕಿ ಸೋಲಿಗೆ ಮೋದಿ ಸಾಂತ್ವನ

hockeymen
Published on

ನವದೆಹಲಿ : ಒಲಿಂಪಿಕ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಭಾರತದ ಪುರುಷರ ಹಾಕಿ ತಂಡ, ಸೆಮಿಫೈನಲ್ಸ್​ನಲ್ಲಿ 2-5 ಸ್ಕೋರ್​ನೊಂದಿಗೆ ವರ್ಲ್ಡ್​ ನಂ.2 ಆಗಿರುವ ಬೆಲ್ಜಿಯಂ ತಂಡದ ವಿರುದ್ಧ ಸೋತಿದೆ. ಹಾಕಿಯಲ್ಲಿ ಚಿನ್ನದ ಪದಕದತ್ತಲೇ ನಿರೀಕ್ಷೆ ಇರಿಸಿದ್ದ ಕ್ರೀಡಾಪ್ರೇಮಿಗಳಿಗೆ ಇದು ಭಾರೀ ನಿರಾಶೆ ತಂದಿದೆ.

ಈ ಸಂದರ್ಭದಲ್ಲಿ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಗೆಲುವುಗಳು ಮತ್ತು ಸೋಲುಗಳು ಜೀವನದ ಭಾಗವಾಗಿದೆ" ಎಂದು ಸಾಂತ್ವನ ಹೇಳಿದ್ದಾರೆ. ಜೊತೆಗೆ, "ನಮ್ಮ ಪುರುಷರ ಹಾಕಿ ತಂಡ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ. ಇದೇ ಮುಖ್ಯವಾಗಿ ಗಣನೆಗೆ ಬರುವುದು" ಎಂದಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಇನ್ನೂ ಕಂಚಿನ ಪದಕಕ್ಕಾಗಿ ಸೆಣಸಲಿರುವ ಹಿನ್ನೆಲೆಯಲ್ಲಿ, ಮುಂದಿನ ಪಂದ್ಯಕ್ಕೆ ತಂಡಕ್ಕೆ ಶುಭ ಕೋರಿರುವ ಪ್ರಧಾನಿ ಮೋದಿ, "ಭಾರತ ನಮ್ಮ ಆಟಗಾರರ ಬಗ್ಗೆ ಹೆಮ್ಮೆ ಹೊಂದಿದೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net