ಭಾರತ ಹಾಕಿ ತಂಡವನ್ನು ಅಭಿನಂದಿಸಿದ ಆಸ್ಟ್ರೇಲಿಯಾ ಹೈಕಮಿಷನರ್​

hockeywomen
Published on

ನವದೆಹಲಿ : ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾದ ಬಲಿಷ್ಠ ತಂಡವನ್ನು 1-0 ಅಂತರದಿಂದ ಸೋಲಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್​ ಸೆಮಿಫೈನಲ್ಸ್​ ಪ್ರವೇಶಿಸಿದೆ. ವರ್ಲ್ಡ್​ ನಂ.4 ತಂಡವಾದ ಆಸ್ಟ್ರೇಲಿಯಾ ತಂಡವನ್ನು ವರ್ಲ್ಡ್​ ನಂ.10 ಆಗಿರುವ ಭಾರತ ತಂಡ ಮಣಿಸಿರುವುದಕ್ಕೆ ಆಟಗಾರ್ತಿಯರಿಗೆ ಪ್ರಶಂಸೆಯ ಹೊಳೆ ಹರಿದಿದೆ.

ಈ ಸಾಧನೆಗೆ ಭಾರತಕ್ಕೆ ಆಸ್ಟ್ರೇಲಿಯಾದ ಹೈಕಮಿಷನರ್​ ಆಗಿರುವ ಬ್ಯಾರ್ರಿ ಒ'ಫೆರ್ರೆಲ್​ ಅವರು ಕೂಡ ಭಾರತೀಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. "ವೆಲ್​ ಡನ್​!" ಎಂದು ಶ್ಲಾಘಿಸಿರುವ ಅವರು, "ಅದು ಕಠಿಣವಾದ ಪಂದ್ಯವಾಗಿತ್ತು. ಆದರೆ ನಿಮ್ಮ ಡಿಫೆನ್ಸ್​​ ಕೊನೆಯವರೆಗೂ ಪಟ್ಟಾಗಿ ಮುಂದುವರೆದಿತ್ತು" ಎಂದಿದ್ದಾರೆ.

ಜೊತೆಗೆ, ಉತ್ತಮ ಆಟಗಾರಿಕೆ ಪ್ರದರ್ಶಿಸಿದ ಭಾರತ ತಂಡದ ಸವಿತಾ ಪೂನಿಯ ಅವರನ್ನು "ಗ್ರೇಟ್​ ವಾಲ್​ ಆಫ್​ ಇಂಡಿಯ" ಎಂದು ಕರೆದು "ಸವಿತಾರನ್ನು ಮಣಿಸಲು ಸಾಧ್ಯವಾಗಲಿಲ್ಲ" ಎಂದು ಟ್ವೀಟ್​ ಮಾಡಿರುವ ಒ'ಫೆರ್ರೆಲ್​, "ಬೆಸ್ಟ್​ ಆಫ್​ ಲಕ್​ ಇನ್ ಸೆಮಿ ಅಂಡ್​ ಗ್ರ್ಯಾಂಡ್​ ಫೈನಲ್ಸ್​" ಎಂದು ಭಾರತ ತಂಡಕ್ಕೆ ಮುಂದಿನ ಪಂದ್ಯಕ್ಕೆ ಶುಭ ಕೋರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net