More

    ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!

    ಹೊಟ್ಟೆಯ ಗ್ಯಾಸ್​​ ಸಮಸ್ಯೆ, ಮಲಬದ್ಧತೆ ಮತ್ತು ಮಧುಮೇಹ ಉಪಶಮನ ಮಾಡುವಲ್ಲಿ ಬಲು ಸಹಕಾರಿಯಾದಂತಹ ಆಸನವೆಂದರೆ, ಪವನಮುಕ್ತಾಸನ. ಇದರ ನಿಯಮಿತ ಅಭ್ಯಾಸವು, ಜೀರ್ಣಕ್ರಿಯೆಯನ್ನು ಸುಧಾರಿಸಿ, ಶರೀರದ ಆರೋಗ್ಯವನ್ನು ಹೆಚ್ಚಿಸುತ್ತದೆ.

    ಪ್ರಯೋಜನಗಳು : ಹೊಟ್ಟೆಯ ಗ್ಯಾಸ್ ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆಗಳ ನಿವಾರಣೆಯಾಗುತ್ತದೆ. ಮಲಬದ್ಧತೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಈ ಆಸನ ಮಾಡುವುದರಿಂದ ಕುತ್ತಿಗೆ ಮತ್ತು ಬೆನ್ನಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಕರಳು ಮತ್ತು ಹೊಟ್ಟೆಗೆ ಪರಿಣಾಮಕಾರಿಯಾಗಿ ಮಸಾಜ್​ ಆಗುತ್ತದೆ. ಜೀರ್ಣಾಂಗದ ಆಂತರಿಕ ಅಂಗಗಳು ಉತ್ತೇಜಿತಗೊಳ್ಳುತ್ತವೆ. ಬೆನ್ನು, ಕಾಲು ಮತ್ತು ತೋಳುಗಳ ಸ್ನಾಯುಗಳು ಬಲಗೊಳ್ಳುತ್ತವೆ.

    ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಕೊನೆಗೂ ಸಿಕ್ಕ ಬೋಲ್ಟ್ ಉತ್ತರಾಧಿಕಾರಿ…

    ಮಾಡುವ ವಿಧಾನ : ಜಮಖಾನದ ಮೇಲೆ ಅಂಗಾತ ಮಲಗಿ, ಎರಡೂ ಕೈಗಳ ಸಹಾಯದಿಂದ ಬಲಗಾಲನ್ನು ಮಡಿಸಿಕೊಳ್ಳಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಗಲ್ಲವನ್ನು ಮಂಡಿಗೆ ಸ್ಪರ್ಶಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ಬಿಡುತ್ತಾ ನಿಧಾನವಾಗಿ ಕಾಲನ್ನು ಬಿಟ್ಟು ವಿಶ್ರಮಿಸಬೇಕು. ಇದೇ ರೀತಿ ಎರಡೂ ಕೈಗಳನ್ನು ಬಳಸಿ ಎಡಗಾಲನ್ನು ಮಡಿಸಿಕೊಂಡು, ಉಸಿರನ್ನು ತೆಗೆದುಕೊಳ್ಳುತ್ತಾ ಗಲ್ಲವನ್ನು ಮಂಡಿಗೆ ತಾಗಿಸುವುದು. ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸುತ್ತಾ ಈ ಸ್ಥಿತಿಯಲ್ಲಿದ್ದು, ನಂತರ ಉಸಿರನ್ನು ಬಿಡುತ್ತಾ ವಿಶ್ರಮಿಸುವುದು.
    ಸಂಪೂರ್ಣ ಪವನಮುಕ್ತಾಸನ – ಎರಡೂ ಕಾಲುಗಳನ್ನು ಒಟ್ಟಿಗೇ ಮಡಿಚಿ, ಉಸಿರನ್ನು ತೆಗೆದುಕೊಳ್ಳುತ್ತಾ, ಎರಡೂ ಕೈಗಳಿಂದ ಹಿಡಿದುಕೊಳ್ಳಬೇಕು. ಮಂಡಿಗಳಿಗೆ ಗಲ್ಲವನ್ನು ಸ್ಪರ್ಶಿಸಿ ಸ್ವಲ್ಪಹೊತ್ತು ಹಾಗೇ ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರು ಬಿಡುತ್ತಾ ವಿಶ್ರಮಿಸಬೇಕು.

    ಅಧಿಕ ರಕ್ತದೊತ್ತಡ ಇರುವವರು ಪವನಮುಕ್ತಾಸನ ಮಾಡುವುದು ಬೇಡ.

    ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಆಸನವಿದು! ಮೊಲದಂತೆ ಕಾಣುವ ಭಂಗಿ!

    ಅಲ್ವಿದಾ! ರಾಜಕೀಯಕ್ಕೆ ಗುಡ್​ಬೈ ಹೇಳಿದ ಮಾಜಿ ಸಚಿವ ಬಾಬುಲ್ ಸುಪ್ರಿಯೊ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts