ಟೋಕಿಯೋ ಒಲಿಂಪಿಕ್ಸ್: ಕೊನೆಗೂ ಸಿಕ್ಕ ಬೋಲ್ಟ್ ಉತ್ತರಾಧಿಕಾರಿ...

blt
Published on

ಟೋಕಿಯೋ: ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಇಂದು ಉತ್ತರ ಸಿಕ್ಕಿದೆ.

ಇಂದು ನಡೆದ ಪುರುಷರ 100 ಮೀ. ಓಟದಲ್ಲಿ 9.80 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಇಟಲಿ ದೇಶದ ಲಮೌಂಟ್ ಮಾರ್ಕೆಲ್ ಜೊಕೋಬ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಬೋಲ್ಟ್ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಅಮೆರಿಕಾದ ಫ್ರೆಡ್ ಕೆರ್ಲೆ 9.84 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಬೋಲ್ಟ್ ಉತ್ತರಾಧಿಕಾರಿ ಎಂದೇ ಹೇಳಲಾಗಿದ್ದ ಕೆನಡಾದ ಆಂಡ್ರೆ ಡಿ ಗ್ರಾಸ್ 9. 89 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net