ಭಾರತದ ಜೊತೆಗಿನ ಪ್ರತಿ Match Fix... ಶಾಕಿಂಗ್ ವಿವರ ಬಹಿರಂಗಪಡಿಸಿದ ಪಾಕ್​ ಮಾಜಿ ಆಟಗಾರ

India Pakistan
Published on

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕದನವು ಇಡೀ ವಿಶ್ವವ್ಯಾಪಿ ಸಖತ್​ ಸೌಂಡ್​ ಮಾಡುತ್ತದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿ ಆಡಿಲ್ಲವಾದರೂ ಐಸಿಸಿ ಹಾಗೂ ಏಷ್ಯಾಕಪ್​ ಟೂರ್ನಿಯಲ್ಲಿ ಮುಖಾಮುಖಿಯಾದಾಗ ಟಿಆರ್​ಪಿ ಹಾಗೂ ವೀಕ್ಷಕರ ಸಂಖ್ಯೆ ದಾಖಲೆ ಬರೆದಿರುತ್ತದೆ. ಆದರೆ, ಇದೀಗ ಭಾರತ ಹಾಗೂ ಪಾಕ್​ ನಡುವಿನ ಪಂದ್ಯದ ಮೇಲೆ ಮ್ಯಾಚ್​ ಫಿಕ್ಸಿಂಗ್ (Match Fixing)​ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಾಕ್​ ಮಾಜಿ ಕ್ರಿಕೆಟಿಗ ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಾಕ್​ ಮಾಜಿ ಕ್ರಿಕೆಟಿಗ ಮುದಾಸ್ಸರ್ ನಜರ್, ನಮ್ಮ ತಂಡ ಭಾರತದ ಎದುರು ಸೋತಾಗಲೆಲ್ಲಾ ಮ್ಯಾಚ್​ ಫಿಕ್ಸಿಂಗ್​ ಮಾಡಲಾಗಿದೆ ಎಂದು ಸ್ವದೇಶಿಯರು ಆರೋಪಿಸುತ್ತಿದ್ದರು. 21ನೇ ಶತಮಾನದಲ್ಲಿ ಮ್ಯಾಚ್​ ಓಇಕ್ಸಿಂಗ್​ ಎಂಬ ಭೂತ ಪಾಕಿಸ್ತಾನವನ್ನು ಹೆಚ್ಚು ಕಾಡುತ್ತಿದ್ದು, ಮೊಹಮ್ಮದ್ ಅಮೀರ್, ಮೊಹಮ್ಮದ್ ಆಸಿಫ್, ಸಲ್ಮಾನ್ ಬಟ್, ಶಾರ್ಜೀಲ್ ಖಾನ್ ಮತ್ತು ಖಲೀದ್ ಲತೀಫ್ ಅವರಂತಹ ಆಟಗಾರರು ಇದರಲ್ಲಿ ಭಾಗಿಯಾಗಿ ನಿಷೇದಕ್ಕೊಳಗಾಗಿದ್ದಾರೆ.

mudassar nazar

90ರ ದಶಕದಲ್ಲಿದ್ದ ಪಾಕಿಸ್ತಾನ ಕ್ರಿಕೆಟ್​ ತಂಡವನ್ನು ನೋಡುವುದಾದರೆ ಆಸ್ಟ್ರೇಲಿಯಾದಂತೆಯೇ ನಮ್ಮಲ್ಲೂ ಪ್ರತಿಭಾನ್ವಿತರಿದ್ದರು. ಪ್ರತಿಭಾನ್ವಿತರಿದ್ದರೂ ನಾವು ಪಂದ್ಯವನ್ನು ಸೋಲುತ್ತೇವೆ ಎಂಬ ಭಯ ನಮ್ಮನ್ನು ನಿರಂತರವಾಗಿ ಕಾಡುತ್ತಿತ್ತು. ಆದರೆ, ಇಂದಿನ ಕಾಲಘಟ್ಟದಲ್ಲಿ ಪ್ರತಿಬಾರಿಯೂ ಪಾಕಿಸ್ತಾನ ಸೋತಾಗ ಮ್ಯಾಚ್​ ಫಿಕ್ಸಿಂಗ್​ ಆರೋಪ ಕೇಳಿ ಬರುತ್ತಿರುವುದು ಬೇಸರದ ಸಂಗತಿಯಾಗಿದೆ. ಮ್ಯಾಚ್​ ಫಿಕ್ಸಿಂಗ್​ ಹೊರತಾಗಿ ನಮ್ಮ ಆಟಗಾರರು ಉತ್ತಮ ತಂಡದ ಎದುರು ಸೋತಿದ್ದಾರೆ ಎಂಬ ಅಂಶವನ್ನು ಒಪ್ಪಿಕೊಳ್ಳಲು ತಯಾರಿಲ್ಲ.

ನೀವು ಇಲ್ಲಿ ಇನ್ನೊಂದು ಅಂಶ ನೋಡುವುದಾದರೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾರ್ಜಾದಲ್ಲಿ ನಡೆದ ಪಂದ್ಯದ ಬಗ್ಗೆ ಮಾತನಾಡುವುದಾದರೆ ಇಲ್ಲೂ ಕೂಡ ಆರೋಪ ಕೇಳಿ ಬಂತು. ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಸೋಲುವುದು ಕ್ರಿಕೆಟ್​ನಿಂದಲ್ಲ. ಬದಲಿಗೆ ಸಾಮಾನ್ಯ ಜನರ ಆರೋಪಗಳಿಂದ. ಅಲ್ಲಿ ಸಾಕಷ್ಟು ಒತ್ತಡವಿತ್ತು. ದುರದೃಷ್ಟವಶಾತ್, ಮ್ಯಾಚ್ ಫಿಕ್ಸಿಂಗ್ ಸಾಹಸವು ಪಾಕಿಸ್ತಾನ ತಂಡದ ಮೇಲೆ ಪರಿಣಾಮ ಬೀರಿತು. ನಾವು ಪ್ರತಿ ಮ್ಯಾಚ್​ ಫಿಕ್ಸ್​ ಮಾಡಿಕೊಂಡಿದ್ದೇವೆ ಎಂಬ ಆರೋಪ ಕೇಳಿ ಬಂತು ಎಂದು ಮಾಜಿ ಕ್ರಿಕೆಟಿಗ ಮುದಾಸ್ಸರ್​ ನಜರ್​ ಬೇಸರ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net