Bigg Boss ಮನೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ನಾಮಿನೇಷನ್​; ಸ್ಫರ್ಧಿಗಳ ನಡುವೆ ಜೋರಾದ ಜಟಾಪಟಿ

BBK 11
Published on

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​-11 (Bigg Boss Season-11) ಆರಂಭವಾಗಿದ್ದು, ಎಂದಿನಂತೆ ನಟ ಕಿಚ್ಚ ಸುದೀಪ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಬಾರಿ ಸ್ವರ್ಗ-ನರಕ ಎಂಬ ಥೀಮ್​ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹೊಸ ಅಧ್ಯಾಯದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಈಗಾಗಲೇ ಮೊದಲನೇ ವಾರದ ನಾಮಿನೇಷನ್​ ಆರಂಭವಾಗಿದ್ದು, ನರಕ ನಿವಾಸಿ ಚೈತ್ರಾ ಕುಂದಾಪುರ ಅವರನ್ನು ನಾಮಿನೇಟ್​ ಮಾಡಲಾಗಿದೆ. ಇದೀಗ ಎರಡನೇ ಹಂತದ ನಾಮಿನೇಷನ್​ ಪ್ರಕ್ರಿಯೆ ಆರಂಭವಾಗಿದ್ದು, ನಾಮಿನೇಷನ್​ ಪ್ರಕ್ರಿಯೆ ವೇಳೆ ಸ್ವರ್ಗ ನಿವಾಸಿಯಾದ ಯಮುನಾ ಶ್ರೀನಿಧಿ ಹಾಗೂ ನರಕ ನಿವಾಸಿಯಾದ ಶಿಶಿರ್​ ಶಾಸ್ತ್ರಿ ನಡುವೆ ಮಾತಿನ ಚಕಮಕಿಯಾಗಿದೆ.

ಕಲರ್ಸ್​ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋ ನೋಡುವುದಾದರೆ ನಾಮಿನೇಷನ್​ ಪ್ರಕ್ರಿಯೆ ವೇಳೆ ಸ್ಫರ್ಧಿಗಳು ನಟಿ ಭವ್ಯ ಹಾಗೂ ಗೌತಮಿ ಹೆಸರನ್ನು ಸೂಚಿಸಿದ್ದು, ನಟಿ ಯಮುನಾ ಶ್ರೀನಿಧಿ ಅವರು ಗೌತಮಿ ಹೆಸರನ್ನು ಸೂಚಿಸಿ ನೀಡುವ ಕಾರಣ ನರಕ ನಿವಾಸಿಗಳನ್ನು ಕೆರಳಿಸುತ್ತದೆ. ಈ ಬಗ್ಗೆ ಶಿಶಿರ್​ ಶಾಸ್ತ್ರಿ ಹಾಗೂ ಯಮುನಾ ನಡುವೆ ಮಾತಿನ ಚಕಮಕಿಯಾಗಿದ್ದು, ಸಂಚಿಕೆ ಪ್ರಸಾರವಾದ ಬಳಿಕ ಈ ಬಗ್ಗೆ ತಿಳಿದು ಬರಲಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net