ಈ ಟಿ20 ವಿಶ್ವಕಪ್ ಗೆದ್ದರೆ, ನಿಮ್ಮೆಲ್ಲರಿಗೂ… ತಂಡದ ಆಟಗಾರರಿಗೆ ಪಾಕ್​ ಕ್ರಿಕೆಟ್​ ಮಂಡಳಿ ಕೊಟ್ಟ ಪ್ರಮಾಣ ಇದು!

WhatsApp Image 2024-05-06 at 12.16.47 PM
Published on

ಪಾಕಿಸ್ತಾನ: ಟಿ20 ವಿಶ್ವಕಪ್ ಇದೇ ಜೂನ್​ 01ರಿಂದ ವೆಸ್ಟ್​ ಇಂಡೀಸ್ (West Indies)​ ಮತ್ತು ಅಮೆರಿಕಾದಲ್ಲಿ (USA) ನಡೆಯಲಿದ್ದು, ಈಗಾಗಲೇ ಸ್ಪರ್ಧಿಸಲಿರುವ ಆಯಾ ದೇಶದ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಸಾಲಿನಲ್ಲಿ ಟೀಂ ಇಂಡಿಯಾ ಕೂಡ ಇದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾತ್ರ ಇಲ್ಲಿಯವರೆಗೂ ತಮ್ಮ ಟೀಮ್​ನಲ್ಲಿ ಯಾರೆಲ್ಲಾ ಇದ್ದಾರೆ? ಯಾರನ್ನು ಆಯ್ಕೆ ಮಾಡಿದ್ದೇವೆ ಎಂಬುದರ ಪಟ್ಟಿಯನ್ನು ಇನ್ನೂ ಅಧಿಕೃತಗೊಳಿಸಿಲ್ಲ. ಸದ್ಯ ಈ ಬೆನ್ನಲ್ಲೇ ಶಾಕಿಂಗ್ ಸಂಗತಿಯೊಂದು ಪಾಕ್ ಕ್ರಿಕೆಟ್ ಮಂಡಳಿಯಿಂದ ಹೊರಬಿದ್ದಿದ್ದು, ಈ ಬಾರಿಯ ವಿಶ್ವಕಪ್ ಟ್ರೋಫಿ ಗೆದ್ದರೆ, ಪ್ರತಿ ಆಟಗಾರರಿಗೂ ತಾವು ನಿಗದಿಪಡಿಸಿದ ಹಣವನ್ನು ಬಹುಮಾನವಾಗಿ ಕೊಡ್ತೇವೆ ಎಂದು ಭರವಸೆ ನೀಡಿದೆ.

ಪಿಸಿಬಿ ಅಧ್ಯಕ್ಷ ಮೋಸಿನ್​ ನಾಕ್ವಿ ಮಾತನಾಡಿ, "ತಮ್ಮ ತಂಡವೇನಾದರೂ ಈ ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದರೆ, ಪ್ರಮಾಣ ಮಾಡಿ ಹೇಳ್ತೀನಿ, ತಂಡದ ಪ್ರತಿ ಆಟಗಾರನಿಗೂ $100,000 ಹಣವನ್ನು ಬಹುಮಾನದ ರೂಪದಲ್ಲಿ ಕೊಡ್ತೀವಿ" ಎಂದು ಭರವಸೆ ನೀಡಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಇದೀಗ ಅನೇಕರ ಕಣ್ಣು ಪಾಕ್ ಕ್ರಿಕೆಟ್ ಮಂಡಳಿ ಮೇಲೆ ಬಿದ್ದಿದ್ದು, ಇಂತಹ ನಿರ್ಧಾರದ ಹಿಂದಿರುವ ಅಸಲಿ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

2009ರಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್​ ಅನ್ನು ಲಾರ್ಡ್ಸ್​​ ಮೈದಾನದಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಗೆದ್ದು ಬೀಗಿದ್ದ ಪಾಕ್​ಗೆ ಇದೀಗ ಗ್ಯಾರಿ ಕರ್ಸ್ಟನ್ ತಂಡಕ್ಕೆ ನೂತನ ಕೋಚ್ ಆಗಿ ನೇಮಕಗೊಂಡಿರುವುದು ಆನೆಬಲ ತುಂಬಿದಂತಾಗಿದೆ. ಮುಂಬರುವ ಪಂದ್ಯಗಳಲ್ಲಿ ಇಡೀ ತಂಡವನ್ನು ಅವರೇ ತಯಾರು ಮಾಡಲಿದ್ದು, ಗ್ಯಾರಿ ನೇಮಕ ವಿಶ್ವಕಪ್​ ಟ್ರೋಫಿ ಗೆಲ್ಲಲು ಸಹಾಯ ಮಾಡಲಿದೆಯಾ? ಎಂಬ ನಿರೀಕ್ಷೆಗಳು ಸದ್ಯ ಹೆಚ್ಚಾಗಿಯೇ ಇದೆ.

ಇನ್ನು ತಮ್ಮ ತಂಡದ ಆಟಗಾರರಿಗೆ ಕೆಲವು ಮಹತ್ವದ ಸಲಹೆ ನೀಡಿದ ನಾಕ್ವಿ, "ನೀವು ಮತ್ತಿತ್ತರ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಕೇವಲ ಆಟದ ಬಗ್ಗೆ ಮಾತ್ರ ಇರಲಿ ನಿಮ್ಮ ಗಮನ. ಈ ಬಾರಿ ಇಡೀ ದೇಶಕ್ಕೆ ನಮ್ಮ ಮೇಲೆ ಭಾರೀ ನಿರೀಕ್ಷೆಗಳು ಇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net