ಪ್ರಾಯೋಜಕರಿಲ್ಲದೆ ಪರದಾಡಿದ ಪಾಕಿಸ್ತಾನ, ಕೊನೆಗೆ ಅಲ್ಪ ಮೊತ್ತಕ್ಕೆ ಒಪ್ಪಂದ!

PCB
Published on

ಕರಾಚಿ: ಕರೊನಾ ಭೀತಿಯ ನಡುವೆ ಜೈವಿಕ&ಸುರಾ ವಾತಾವರಣದಲ್ಲಿ ಆತಿಥೇಯ ಇಂಗ್ಲೆಂಡ್​ ವಿರುದ್ಧ ಆಡಲು ಸಜ್ಜಾದ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಪ್ರಾಯೋಜಕರ ಕೊರತೆ ತೀವ್ರವಾಗಿ ಕಾಡಿತ್ತು. ಇದಕ್ಕಾಗಿ ಕೊನೆಗೆ ಅಲ್ಪ ಮೊತ್ತದ ಪ್ರಾಯೋಜಕತ್ವಕ್ಕೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಸಮ್ಮತಿಸಿದೆ. ಐಪಿಎಲ್​ನಲ್ಲಿ ತಂಡಗಳು ಗರಿಷ್ಠ 60 ದಿನಗಳ ಟೂನಿರ್ಗಾಗಿ ಪಡೆದುಕೊಳ್ಳುವ ಪ್ರಾಯೋಜಕತ್ವದ ಮೊತ್ತಕ್ಕಿಂತಲೂ ಕಡಿಮೆ ಮೊತ್ತಕ್ಕೆ ಪಿಸಿಬಿ ಒಪ್ಪಿಕೊಂಡಿರುವುದು ಅದರ ಆಥಿರ್ಕ ಅಸಹಾಯಕತೆಯನ್ನು ಎತ್ತಿ ತೋರಿಸಿದೆ.

ಟ್ರಾನ್ಸ್​ಮೀಡಿಯಾ ಜತೆಗೆ ಪಿಸಿಬಿ ಕಡಿಮೆ ಮೊತ್ತದ ಒಪ್ಪಂದಕ್ಕೆ ಪಿಸಿಬಿ ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ. ಟ್ರಾನ್ಸ್​ಮೀಡಿಯಾ ಈಗಾಗಲೆ ಪಿಸಿಬಿ ಜತೆಗೆ ಸಹ&ಪ್ರಾಯೋಜಕನಾಗಿತ್ತು ಮತ್ತು ವಾಷಿರ್ಕ 15 ಕೋಟಿ ರೂ. ಮೊತ್ತವನ್ನು ಪಾವತಿಸುತ್ತಿತ್ತು. ಪಾಕಿಸ್ತಾನ ತಂಡ ಜೆಸಿರ್ ಮತ್ತು ಕಿಟ್​ ಪ್ರಾಯೋಜಕತ್ವಕ್ಕಾಗಿ ಟ್ರಾನ್ಸ್​ಮೀಡಿಯಾ ಕಂಪನಿ ಪಿಸಿಬಿಗೆ 3 ವರ್ಷಗಳಿಗೆ 60 ಕೋಟಿ ರೂ. ಮೊತ್ತದ ಆರ್​ ನೀಡಿತ್ತು. ಈ ಬಗ್ಗೆ ಪಿಸಿಬಿ ನಿರಾಸೆ ವ್ಯಕ್ತಪಡಿಸಿತ್ತು. ಆದರೆ ಕೊನೆಗೆ ಈಗ ಒಂದು ವರ್ಷಕ್ಕೆ 20 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದೆ ಎಂದು ಪಿಸಿಬಿಯ ಮೂಲಗಳು ತಿಳಿಸಿವೆ. ಈ ಮುನ್ನ ಪಿಸಿಬಿ, ಪ್ರಾಯೋಜಕರ ಕೊರತೆಯ ಹಿನ್ನೆಲೆಯಲ್ಲಿ ಮಾಜಿ ನಾಯಕ ಶಾಹಿದ್​ ಅಫ್ರಿದಿ ಅವರ ಫೌಂಡೇಷನ್​ನ ಲಾಂಛನವನ್ನು ಪಾಕ್​ ತಂಡದ ಜೆಸಿರ್ಯಲ್ಲಿ ಬಳಸಲು ನಿರ್ಧರಿಸಿತ್ತು.

ಟ್ರಾನ್ಸ್​ಮೀಡಿಯಾ ಜತೆಗಿನ ಈ ಒಪ್ಪಂದ ಮುಕ್ತಾಯಗೊಂಡ ಬಳಿಕ ಪಿಸಿಬಿ ಮತ್ತೊಮ್ಮೆ ಬಿಡ್​ ಆಹ್ವಾನಿಸಲಿದೆ ಎನ್ನಲಾಗಿದೆ. ಇತ್ತೀಚೆಗೆ ಪಿಸಿಬಿ ಆಹ್ವಾನಿಸಿದ್ದ ಬಿಡ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ 3 ವರ್ಷಗಳಿಂದ ಸಾಫ್ಟ್​ ಡ್ರಿಂಕ್ಸ್​ ಕಂಪನಿ ಪೆಪ್ಸಿ ಜತೆಗೆ ಪಿಸಿಬಿ ಒಪ್ಪಂದ ಹೊಂದಿತ್ತು ಮತ್ತು 5.5 ದಶಲ ಡಾಲರ್​ (41.37 ಕೋಟಿ ರೂ.) ಮೊತ್ತ ಪಡೆದುಕೊಂಡಿತ್ತು. ಕಳೆದ ತಿಂಗಳು ಒಪ್ಪಂದ ಮುಕ್ತಾಯಗೊಂಡ ಬಳಿಕ ಪೆಪ್ಸಿ ಪ್ರಾಯೋಜಕತ್ವ ಮುಂದುವರಿಸಲು ನಿರಾಕರಿಸಿತ್ತು. ಅಲ್ಲದೆ ಹಿಂದಿನ ಮೊತ್ತಕ್ಕಿಂತ ಶೇ. 30ರಷ್ಟು ಮೊತ್ತಕ್ಕೆ ಮಾತ್ರ ಒಪ್ಪಂದ ಮುಂದುವರಿಸಲು ಸಿದ್ಧ ಎಂದಿತ್ತು. ಕರೊನಾ ಹಾವಳಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಆಥಿರ್ಕ ಮುಗ್ಗಟ್ಟು ಎದುರಾಗಿರುವುದರಿಂದ ಪ್ರಾಯೋಜಕತ್ವಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದು ಪಿಸಿಬಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net