'ಬೆಂಬಲಿಸಿದ ಎಲ್ಲರಿಗೂ ಧನ್ಯವಾದ'; ಸೋಲಿನ ಬೆನ್ನಲೇ ಹಾರ್ದಿಕ್ ಪಾಂಡ್ಯಾ ಟ್ವೀಟ್

Hardik Pandya
Published on

ಅಡಿಲೇಡ್: ಟಿ-20 ವಿಶ್ವಕಪ್​ನ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯ ಸೋಲು ಕಂಡಿದೆ. ಭಾರತದ ತಂಡ ವಿಶ್ವಕಪ್ ಹಾದಿ ಸೋಲಿನೊಂದಿಗೆ ಮುಕ್ತಾಯವಾಗುತ್ತಿದ್ದಂತೆ, ಇದೀಗ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶದ ಮೂಲಕ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

'ಕನಸು ಈಡೇರದೇ ಇದ್ದಾಗ ನೋವಾಗುವುದು ಸಹಜ. ನಮ್ಮೆಲ್ಲರ ಕನಸು ಧ್ವಂಸವಾದಂತಾಗಿದೆ. ಈವರೆಗೂ ನಾವೆಲ್ಲರೂ ಒಂದು ತಂಡವಾಗಿ ಆಡಿದ್ದೇವೆ. ಇದನ್ನು ನಾನು ಆನಂದಿಸಿದ್ದೇನೆ. ಸೆಮಿಫೈನಲ್​ವರೆಗೂ ಪ್ರತೀ ಹಂತದಲ್ಲೂ ಕಠಿಣ ಪರಿಶ್ರಮದೊಂದಿಗೆ ಪರಸ್ಪರ ಹೋರಾಡಿದ್ದೇವೆ. ತಿಂಗಳುಗಳಿಂದ ನಮ್ಮನ್ನು ಬೆಂಬಲಿಸಿದವರಿಗೆ ಹಾಗೂ ನಮ್ಮ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು' ಎಂದು ಹಾರ್ದಿಕ್ ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯಾ ಟಿ-20 ವಿಶ್ವಕಪ್ ಪಂದ್ಯದುದ್ದಕ್ಕೂ ಉತ್ತಮ ನಿರ್ವಹಣೆಯನ್ನೇ ತೋರಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಜತೆಗೆ ಉತ್ತಮ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ನಿರ್ಣಾಯಕ ಹೊತ್ತಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. 33 ಎಸೆತಗಳಿಂದ 63 ರನ್ ಕಲೆ ಹಾಕಿದ್ದರು. ಕೊಹ್ಲಿ ಔಟ್ ಆಗುತ್ತಿದ್ದಂತೆ ತಂಡದ ಮೊತ್ತ 168 ಆಗುವಲ್ಲಿ ಪಾಂಡ್ಯಾ ಅರ್ಧಶತಕ ನೆರವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net