

Asia Cup: 2025 ಏಷ್ಯಾ ಕಪ್ ಗ್ರೂಪ್ ಎ ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲು ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು ನಿಗದಿತ 20 ಒವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ಗಳಿಸಿದೆ.
ಈ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಬಂದ ಪಾಕ್ಗೆ ಆರಂಭಿಕ ಆಟಗಾರ ಸೈಮ್ ಅಯೂಬ್ನನ್ನು ಭಾರತದ ಸ್ಟಾರ್ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟ್ ಮಾಡಿದರು. ನಂತರ ಬಂದ ಫಖರ್ ಜಮಾನ್ (17), ನಾಯಕ ಸಲ್ಮಾನ್ ಅಲಿ ಅಘಾ (3), ಸಾಹಿಬ್‌ಜಾದಾ ಫರ್ಹಾನ್ 40 ರನ್ಗಳಿಸಿದರು. ನಂತರ ಶಾಹೀನ್ ಅಫ್ರಿದಿಯು ಕೊನೆಯ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 33 ರನ್ ಗಳಿಸಿದರು.
ಭಾರತದ ಪರವಾಗಿ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪಾಕಿಸ್ತಾನವನ್ನು ಕಡಿದರು. ಕುಲದೀಪ್ ಯಾದವ್ 3 ವಿಕೆಟ್ ಅಕ್ಷರ್ ಪಟೇಲ್ 2, ಮತ್ತು ಜಸ್ಪ್ರೀತ್ ಬುಮ್ರಾ 2 ಪ್ರಮುಖ ವಿಕೆಟ್ ಪಡೆದು ಪಾಕ್ ಅಲ್ಪಮೊತ್ತಗಳಿಸುವಂತೆ ಮಾಡಿದರು.
ಎರಡೂ ರಾಷ್ಟ್ರಗಳ ಸುತ್ತಲಿನ ರಾಜಕೀಯ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯವು ಮಹತ್ವದಾಗಿದೆ. ಈ ಪಂದ್ಯದ ವಿಜೇತರು ಏಷ್ಯಾ ಕಪ್ ಸೂಪರ್ ಫೋರ್‌ಗೆ ಅರ್ಹತೆಯನ್ನು ಬಹುತೇಕ ಖಚಿತಪಡಿಸಿಕೊಳ್ಳುತ್ತಾರೆ.
ಪಂದ್ಯಕ್ಕೂ ಮುನ್ನ ದುಬೈನಲ್ಲಿ ಪೊಲೀಸರು ಭಾರಿ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ, ಪ್ರೇಕ್ಷಕರಿಗೆ 7 ಲಕ್ಷ ರೂ.ಗಳವರೆಗೆ ದಂಡ, ಕಠಿಣ ನಿಯಮಗಳನ್ನು ಉಲ್ಲಂಘಿಸಿದರೆ ಗಡೀಪಾರು ಅಥವಾ ಜೈಲು ಶಿಕ್ಷೆ ವಿಧಿಸಬಹುದು. ಎರಡೂ ತಂಡಗಳು ಟೂರ್ನಮೆಂಟ್‌ನಲ್ಲಿ ತಮ್ಮ ಆರಂಭಿಕ ಪಂದ್ಯಗಳನ್ನು ಗೆದ್ದ ನಂತರ ಈ ಪಂದ್ಯ ನಡೆಯುತ್ತಿದೆ. (ಏಜೆನ್ಸೀಸ್)