

Demographic Mission: ದೇಶದ ಪ್ರಮುಖ ಗಡಿ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ಜನಸಂಖ್ಯಾಶಾಸ್ತ್ರ ಮಿಷನ್ ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಸೆಪ್ಟೆಂಬರ್,14) ತಿಳಿಸಿದ್ದಾರೆ.
ಆಸ್ಸಾಂನ ದರ್ರಾಂಗ್‌ನ ಮಂಗಲ್‌ಡೋಯ್‌ನಲ್ಲಿ ನಡೆದ ಉದ್ದೇಶಿಸಿ ಮಾತನಾಡಿದ ಮೋದಿ, ಗಡಿಯಲ್ಲಿ ಒಳನುಸುಳುಕೋರರ ಸಹಾಯದಿಂದ ಭಾರತದ ಗಡಿ ಪ್ರದೇಶಗಳಲ್ಲಿ ಜನಸಂಖ್ಯೆ ಬದಲಾಯಿಸುವ ಪೂರ್ವಯೋಜಿತ ಪಿತೂರಿಯನ್ನು ನಿಭಾಯಿಸುವುದು ಈ ಕಾರ್ಯಾಚರಣೆ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿ, ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ದೇಶದಲ್ಲಿ ಜನಸಂಖ್ಯಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ ಮತ್ತು ದೇಶದ ಜನರನ್ನು ಒಳನುಸುಳುವವರಿಂದ ರಕ್ಷಿಸುವುದು ಮತ್ತು ಅವರನ್ನು ತೊಡೆದುಹಾಕುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.
ನುಸುಳುಕೋರರು ಭಾರತದಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಕಾಂಗ್ರೆಸ್ ಬಯಸುತ್ತಿದೆ.ಅಲ್ಲದೆ, ಬುಡಕಟ್ಟು ಜನಾಂಗದವರು ಮತ್ತು ಪೂಜಾ ಸ್ಥಳಗಳ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ಕಾಂಗ್ರೆಸ್ಉತ್ತೇಜಿಸುತ್ತಿದೆ ಎಂದು ಆರೋಪಿಸಿದರು. ಅತಿಕ್ರಮಣವನ್ನು ತೆರವುಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ, ಒಳನುಸುಳುಕೋರರು ವಶಪಡಿಸಿಕೊಂಡಿದ್ದ ಲಕ್ಷಾಂತರ ಬಿಘಾ ಭೂಮಿಯನ್ನು ವಾಪಸ್ ಪಡೆಯಲಾಗಿದೆ. ದರ್ರಾಂಗ್‌ನಲ್ಲಿ, ಗೋರುಖುಟಿಯಲ್ಲಿನ ಭೂಮಿ ಒಳನುಸುಳುವವರ ಹಿಡಿತದಲ್ಲಿತ್ತು. ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ ಎಂದು ಮೋದಿ ಹೇಳಿದರು.
ಅಲ್ಲದೆ, ಭಾರತ ವಿರೋಧಿ ವ್ಯಕ್ತಿಗಳು ಮತ್ತು ಸಿದ್ಧಾಂತಗಳ ಪರವಾಗಿ ಕಾಂಗ್ರೆಸ್ ನಿಂತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತ ರಕ್ತಸಿಕ್ತವಾಗಿತ್ತು, ಆದರೆ, ಕಾಂಗ್ರೆಸ್ ಮೌನವಾಗಿರಲು ನಿರ್ಧರಿಸಿತು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)