VIDEO|ಫಾರ್ಮ್ ಹೌಸ್​ನಲ್ಲಿ ಅಭ್ಯಾಸ ಆರಂಭಿಸಿದ ವೇಗಿ ಮೊಹಮದ್​ ಶಮಿ

shami for web1
Published on

ನವದೆಹಲಿ: ಕರೊನಾ ವೈರಸ್​ ಭೀತಿಯಿಂದಾಗಿ ಸಂಪೂರ್ಣ ಕ್ರೀಡಾ ಚಟುವಟಿಕೆಗಳೇ ಬಂದ್​ ಆಗಿವೆ. ಲಾಕ್​ಡೌನ್​ನಿಂದಾಗಿ ಕಳೆದ ಮೂರು ತಿಂಗಳಿಂದ ಕ್ರೀಡಾಪಟುಗಳು ಕನಿಷ್ಠ ಮೈದಾನದ ಕಡೆಗೂ ಮುಖಮಾಡಿಲ್ಲ. ಇದ್ದಲ್ಲಿಯೇ ವರ್ಕ್​ಔಟ್​, ಜಿಮ್​ ಮೂಲಕ ದೈಹಿಕ ಕಸರತ್ತಿನಲ್ಲಿ ತೊಡಗಿದ್ದರೆ, ಕೆಲಮಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಕ್ರಿಯರಾಗಿದ್ದಾರೆ. ಭಾರತದ ಬಲಗೈ ವೇಗದ ಬೌಲರ್​ ಮೊಹಮದ್​ ಶಮಿ ಮಾತ್ರ ಎಲ್ಲರಿಗೂ ವಿಭಿನ್ನ. ಲಾಕ್​ಡೌನ್​ ವೇಳೆ ಉತ್ತರಪ್ರದೇಶದಲ್ಲಿರುವ ತಮ್ಮ ಫಾಮ್​ರ್ಹೌಸ್​ನಲ್ಲಿದ್ದ ಶಮಿ, ಇದೀಗ ಅಲ್ಲೇ ಸಹೋದರರೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ.

ಫಾರ್ಮ್ ಹೌಸ್​ನಲ್ಲಿ ನಿಮಿರ್ಸಿಕೊಂಡಿರುವ ಕೃತಕ ನೆಟ್ಸ್​ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಗುಣಮಟ್ಟದ ಅಭ್ಯಾಸ ಅವಧಿ ಇದಾಗಿತ್ತು. ಫಾರ್ಮ್ ಹೌಸ್​ನಲ್ಲಿ ನನ್ನ ಸಹೋದರ ಸಂಬಂಧಿಗಳೊಂದಿಗೆ ಅಭ್ಯಾಸ ನಡೆಸಿದ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ನ್ಯೂಜಿಲೆಂಡ್​ ಎದುರು ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಡೇ ಬಾರಿಗೆ ಶಮಿ ರಾಷ್ಟ್ರೀಯ ತಂಡದ ಪರ ಕಾಣಿಸಿಕೊಂಡಿದ್ದರು. ಭಾರತದ ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ರಮುಖ ಅಸ್ತ್ರವಾಗಿರುವ ಶಮಿ, 2018-19ನೇ ಸಾಲಿನಲ್ಲಿ ಆಸ್ಟ್ರೆಲಿಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಟೆಸ್ಟ್​ ಸರಣಿ ಗೆಲುವಿನಲ್ಲಿ ಶಮಿ ಪ್ರಮುಖ ಪಾತ್ರವಹಿಸಿದ್ದರು.

ಕಳೆದ ಮೂರು ತಿಂಗಳಿಂದ ಲಾಕ್​ ಆಗಿದ್ದ ಕ್ರಿಕೆಟಿಗರು ಪರಸ್ಥಿತಿ ಅವಲೋಕಿಸಿಕೊಂಡು ಅಭ್ಯಾಸ ಆರಂಭಿಸುತ್ತಿದ್ದಾರೆ. ಮೊನ್ನೆಯಷ್ಟೇ ಆಲ್ರೌಂಡರ್​ ಕೃನಾಲ್​ ಪಾಂಡ್ಯ ಚೇತೇಶ್ವರ ಪೂಜಾರ, ಜೈದೇವ್​ ಉನಾದ್ಕತ್​ ಸೇರಿದಂತೆ ಕೆಲ ಗುಜರಾತ್​ ಕ್ರಿಕೆಟಿಗರು ಅಭ್ಯಾಸ ಆರಂಭಿಸಿದರು. ಜಸ್​ಪ್ರಿತ್​ ಬುಮ್ರಾ, ಇಶಾಂತ್​ ಶರ್ಮ ಬಳಿಕ ಶಮಿ ಭಾರತದ ಪ್ರಮುಖ ವೇಗಿಯಾಗಿದ್ದಾರೆ. 2019ರ ಏಕದಿನ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net