

ಲಾಹೋರ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್ಗೆ ಮಾದರಿಯಾಗಿರುವ ಆಟಗಾರ. ಮೂರು ಮಾದರಿ ಕ್ರಿಕೆಟ್ನಲ್ಲಿ ಭಾರತ ಮುನ್ನಡೆಸುತ್ತಿರುವ ಕೊಹ್ಲಿಗೆ ಅದೆಷ್ಟೋ ಯುವ ಕ್ರಿಕೆಟಿಗರಿಗೆ ಮಾದರಿಯಾಗಿರುವ ವ್ಯಕ್ತಿ. ಕೊಹ್ಲಿ ಮಾದರಿಯಲ್ಲೇ ಬ್ಯಾಟಿಂಗ್ ಮಾಡಲು ಇಚ್ಛಿಸುತ್ತೇನೆ, ಅವರೇ ನನಗೆ ಸ್ಫೂರ್ತಿ ಎಂದು ಎದುರಾಳಿ ತಂಡದ ಆಟಗಾರರು ಹೇಳಿದ್ದುಂಟು. ಕೆಲ ದಿನಗಳ ಹಿಂದೆ ಪಾಕಿಸ್ತಾನದ ನಿಗದಿತ ಓವರ್ಗಳ ತಂಡದ ನಾಯಕ ಬಾಬರ್ ಅಜಮ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ್ದುಂಟು. ಆತನೂ ಕೂಡ ಕೊಹ್ಲಿಗೆ ಹೋಲಿಸಿದ ನಂತರ ಹಿಗ್ಗಿದ್ದುಂಟು. ಇದೀಗ ತಂಡದ ನಾಯಕನಾಗಿ ಆಯ್ಕೆಮಾಡಿದ್ದೆ ತಡ. ಕೊಹ್ಲಿಗಿಂತ ಪಾಕಿಸ್ತಾನದ ಮಾಜಿ ಆಟಗಾರರಿಗೆ ಹೋಲಿಕೆ ಮಾಡಿದ ಎಂದು ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮಾದರಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಬಾಬರ್ ಅಜಮ್ ಅವರನ್ನು ಕೊಹ್ಲಿಗೆ ಹೋಲಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಜಂ, ಭಾರತದ ಆಟಗಾರನ ಬದಲಿಗೆ ಸ್ವದೇಶದ ಜಾವೇದ್ ಮಿಯಾಂದಾದ್, ಯೂನಿಸ್ ಖಾನ್, ಇಂಜಾಮನ್ ಉಲ್ ಹಕ್ಗೆ ಹೋಲಿಕೆ ಮಾಡಿ ಎಂದು ಹೇಳಿದ್ದಾರೆ. 25 ವರ್ಷದ ಬಾಬರ್ ಅಜಮ್, ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಸರಾಸರಿ 50 ಹೊಂದಿದ್ದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಸರಾಸರಿ 45 ಹೊಂದಿದ್ದಾರೆ. ಭಾರತದ ಆಟಗಾರನ ಬದಲಿಗೆ ಸ್ವದೇಶದ ಆಟಗಾನಿಗೆ ಹೋಲಿಸಿ ಎಂದು ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ತಂಡ ಇಂಗ್ಲೆಂಡ್ನಲ್ಲಿ ತಲಾ 3 ಟೆಸ್ಟ್, 3 ಟಿ20 ಪಂದ್ಯಗಳನ್ನಾಡಲಿದೆ. ಈಗಾಗಲೇ 20 ಸದಸ್ಯರು ಇಂಗ್ಲೆಂಡ್ ತಲುಪಿದ್ದರೆ, ಕೋವಿಡ್&19ರ ಪಾಸಿಟಿವ್ಗೆ ಒಳಗಾಗಿದ್ದ 6 ಮಂದಿಯ ಇದೀಗ ಸತತ 2ನೇ ವರದಿಯಲ್ಲೂ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಶ್ರೀವೇ ತಂಡ ಕೂಡಿಕೊಳ್ಳಲಿದ್ದಾರೆ. ಈಗಾಗಲೇ ಇಂಗ್ಲೆಂಡ್ನಲ್ಲಿ ವೆಸ್ಟ್ ಇಂಡೀಸ್ ತಂಡ ಜುಲೈ 8 ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.