More

    ಇಂದು ಬರ್ತ್​ಡೇ ಆಚರಿಸುತ್ತಿರುವ ಐವರು ಕ್ರಿಕೆಟಿಗರು ಸಾವಿರ ವಿಕೆಟ್ ಸರದಾರರು!

    ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಶುಕ್ರವಾರ ಐವರು ಕ್ರಿಕೆಟಿಗರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಐವರೂ ಬೌಲಿಂಗ್​ ಮಾಡುತ್ತಿದ್ದರು ಎಂಬುದು ಕಾಕತಾಳೀಯ. ಇವರೆಲ್ಲರೂ ಟೆಸ್ಟ್ ಕ್ರಿಕೆಟ್​ನಲ್ಲಿ ಒಟ್ಟಾರೆಯಾಗಿ 1090 ವಿಕೆಟ್ ಕಬಳಿಸಿದ್ದಾರೆ ಎಂಬುದು ವಿಶೇಷ! ಹಾಗಾದರೆ ಯಾರವರು ಗೊತ್ತೇ?

    ಭಾರತದ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ (40 ವರ್ಷ), ನ್ಯೂಜಿಲೆಂಡ್ನ ವೇಗದ ಬೌಲಿಂಗ್ ದಿಗ್ಗಜ ರಿಚರ್ಡ್ ಹ್ಯಾಡ್ಲಿ (69 ವರ್ಷ), ಇವನ್ ಚಾಟ್​ಫೀಲ್ಡ್ (70 ವರ್ಷ), ಪಾಕಿಸ್ತಾನದ ವಾಸಿಂ ರಾಜಾ (68 ವರ್ಷ) ಮತ್ತು ಜಿಂಬಾಬ್ವೆಯ ವೇಗಿ ಹೆನ್ರಿ ಒಲಾಂಗ (44 ವರ್ಷ) ಶುಕ್ರವಾರ ಬರ್ತ್​ಡೇ ಆಚರಿಸುತ್ತಿರುವ ಐವರು ಕ್ರಿಕೆಟಿಗರಾಗಿದ್ದಾರೆ. ಇವರಲ್ಲಿ ಹರ್ಭಜನ್ 417, ರಿಚರ್ಡ್ ಹ್ಯಾಡ್ಲಿ 431, ಚಾಟ್​ಫೀಲ್ಡ್ 123, ವಾಸಿಂ ರಾಜಾ 51 ಮತ್ತು ಒಲಾಂಗ 68 ವಿಕೆಟ್ ಕಬಳಿಸಿದ್ದಾರೆ. ಹ್ಯಾಡ್ಲಿ ಮತ್ತು ಚಾಟ್​ಫೀಲ್ಡ್ ಸಮಕಾಲೀನ ಬೌಲರ್​ಗಳಾಗಿದ್ದು ಮಾತ್ರವಲ್ಲದೆ ನ್ಯೂಜಿಲೆಂಡ್ ತಂಡದ ಪರ ಹೊಸ ಚೆಂಡು ಹಂಚಿಕೊಳ್ಳುತ್ತಿದ್ದರು. ವೀಕ್ಷಕವಿವರಣೆಕಾರರಾಗಿ ಜನಪ್ರಿಯರಾಗಿರುವ ಪಾಕಿಸ್ತಾನದ ಮಾಜಿ ನಾಯಕ ರಮೀಜ್​ ರಾಜಾ ಅವರ ಅಣ್ಣನಾಗಿರುವ ವಾಸಿಂ ರಾಜಾ, ತಜ್ಱ ಬ್ಯಾಟ್ಸ್​ಮನ್​ ಆಗಿದ್ದರೂ, ಬೌಲಿಂಗ್​ನಲ್ಲೂ ಸಾಕಷ್ಟು ಮಿಂಚಿದ್ದರು. ವಾಸಿಂ ರಾಜಾ 2006ರಲ್ಲೇ ನಿಧನ ಹೊಂದಿದ್ದರು.

    ಇದನ್ನೂ ಓದಿ: VIDEO|ಬರ್ತ್ ಡೇಗೆ ವಿಶ್​ ಮಾಡುವಾಗಲೂ ಹರ್ಭಜನ್​ ಕಾಲೆಳೆದ ಯುವಿ..!

    ಈ ಐವರು ಬೌಲರ್​ಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಒಟ್ಟಾರೆ 319 ಪಂದ್ಯಗಳಲ್ಲಿ 11,574 ಓವರ್ ಬೌಲಿಂಗ್ ಮಾಡಿದ್ದು, ಈ ಪೈಕಿ 2434 ಮೇಡನ್​ಗಳು. 31,553 ರನ್ ಬಿಟ್ಟುಕೊಟ್ಟಿದ್ದು, 28.95ರ ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದಾರೆ. 66 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ ಮತ್ತು 15 ಪಂದ್ಯಗಳಲ್ಲಿ 10 ವಿಕೆಟ್ ಗೊಂಚಲು ಗಳಿಸಿದ್ದಾರೆ. ಈ ಪೈಕಿ ಹರ್ಭಜನ್ ಸಿಂಗ್ ಮಾತ್ರ ಹ್ಯಾಟ್ರಿಕ್ ವಿಕೆಟ್ ಸಾಧಕರಾಗಿದ್ದಾರೆ. ಒಟ್ಟಾರೆಯಾಗಿ 118 ಕ್ಯಾಚ್ ಕೂಡ ಪಡೆದಿದ್ದು, 8 ಶತಕಗಳ ಸಹಿತ 8,534 ರನ್ ಕೂಡ ಗಳಿಸಿದ್ದಾರೆ ಎಂದು ಜನಪ್ರಿಯ ಕ್ರಿಕೆಟ್ ಅಂಕಿ-ಅಂಶ ತಜ್ಱ ಮೋಹನ್​ದಾಸ್ ಮೆನನ್ ಮಾಹಿತಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts