

ಅಹಮದಾಬದ್: ಏಕದಿನ ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಇಂದು (ಅಕ್ಟೋಬರ್ 14)ರಂದು ಕ್ರಿಕೆಟ್ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಸೆಣಸಾಡುತ್ತಿವೆ. ಈಗಾಗಲೆ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ.
ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಎಲ್ಲ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆ ಹಾಡಿ ಗೌರವ ಸೂಚಿಸುವುದು ವಾಡಿಕೆ. ಅದರಂತೆ ಈ ಪಂದ್ಯದಲ್ಲಿ ಕೂಡ ರಾಷ್ಟ್ರಗೀತೆ ಪ್ರಸಾರ ಮಾಡಲಾಯಿತು. ಈ ಸಂದರ್ಭ ಅಪರೂಪದ ಘಟನೆ ನಡೆದಿದೆ.
1,30,000ಕ್ಕೂ ಅಧಿಕ ಆಸನ ಸಾಮರ್ಥ್ಯವಿರುವ ನೃರೇಂದ್ರ ಮೋದಿ ಕ್ರೀಡಾಂಗಣ ಹೌಸ್ಫುಲ್ ಆಗಿದ್ದು, ಭಾರತದ ರಾಷ್ಟ್ರಗೀತೆ ಪ್ರಸಾರವಾದಾಗ ನೂತನ ದಾಖಲೆ ನಿರ್ಮಾಣವಾಯಿತು. ಭಾರತೀಯ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುವಾಗ, ಮೈದಾನದಲ್ಲಿ ನೆರದಿದ್ದ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ರಾಷ್ಟ್ರಗೀತೆಗೆ ದನಿಯಾದ ಅಪರೂಪದ ಘಟನೆ ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.