More

    ಭಾರತ-ಪಾಕ್ ಕ್ರಿಕೆಟ್​ ಕದನಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಬಾಯ್ಕಾಟ್​ ಅಭಿಯಾನ; ಕಾರಣ ಹೀಗಿದೆ

    ಅಹಮದಬಾದ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕದನಕ್ಕೆ ಇನ್ನೇನು ಕೆಲವೇ ಘಂಟೆಗಳು ಬಾಕಿಯಿದ್ದು, ಪಂದ್ಯ ಶುರುವಾಗುವುದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್​ ಎಂಬ ಪದವು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

    ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳು ಸೆಣಸಾಡಲಿವೆ. ಆದರೆ, ಪಂದ್ಯ ಶುರುವಾಗುವುದಕ್ಕೂ ಮುನ್ನ ಬಿಸಿಸಿಐ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಅದಕ್ಕೆ ಸಂಬಂಧಿಸಿದಂತೆ ಭರ್ಜರಿ ಪ್ರಚಾರ ನೀಡುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

    ಪಾಕಿಸ್ತಾನ ತಂಡದ ಆಟಗಾರರಿಗೆ ಅಹಮದಬಾದಿನ ಹೋಟೆಲ್​ನಲ್ಲಿ ಭವ್ಯ ಸ್ವಾಗತ ದೊರೆತಿರುವುದು ಹಲವರ ಕಣ್ಣು ಕೆಂಪಗಾಗಿಸಿದ್ದು, ನಮ್ಮ ದೇಶದ ಯೋಧರನ್ನು ಬಲಿ ಪಡೆದಿರುವ ಇವರಿಗೆ ಈ ರೀತಿಯ ಸ್ವಾಗತ ಕೋರುವುದರಲ್ಲಿ ಅರ್ಥವೇನಿದೆ ಎಂದು ಹಲವರು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಆಪತ್ತು ಎದುರಾಗಿದೆ: ನಾರಾ ಲೋಕೇಶ್ ಆರೋಪ

    ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬಾಯ್ಕಾಟ್​ ಇಂಡೋ ಪಾಕ್​ ಮ್ಯಾಚ್​ ಎಂಬ ಹ್ಯಾಶ್​ಟ್ಯಾಗ್​ನಡಿ ಅಭಿಯಾನ ಶುರುವಾಗಿದ್ದು, ಭಾರತದ ಯೋಧರ ಪ್ರಾಣ ಕಸಿದ ಪಾಕಿಸ್ತಾನದ ವಿರುದ್ಧ ಪಂದ್ಯ ಆಯೋಜನೆ ಮಾಡುತ್ತಿರುವ ಬಿಸಿಸಿಐಗೆ ನಾಚಿಕೆಯಾಗಬೇಕು. ಇದಲ್ಲದೆ ವಿಶ್ವಕಪ್​ ಉದ್ಘಾಟನೆಗೆ ಇಲ್ಲದಿರುವ ಮನರಂಜನಾ ಕಾರ್ಯಕ್ರಮ ಭಾರತ ಹಾಗೂ ಪಾಕ್​ ನಡುವಿನ ಪಂದ್ಯಕ್ಕೆ ಯಾಕೆ ಆಯೋಜನೆ ಮಾಡಲಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

    ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್​ ಇಂಡೋ ಪಾಕ್​ ಮ್ಯಾಚ್​ ಹೆಚ್ಚು ಟ್ರೆಂಡ್​ ಮಾಡುತ್ತಿದ್ದು, ಕೆಲವರು ಯಾವುದೇ ಕಾರಣಕ್ಕೂ ನಾಳೆ ನಾವು ಪಂದ್ಯ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇತ್ತ ಬಾಯ್ಕಾಟ್​ ಸುದ್ದಿ ಹೊರಬೀಳುತ್ತಿದ್ದಂತೆ ನರೇಂದ್ರ ಮೋದಿ ಕ್ರೀಡಾಂಗಣದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆಯನ್ನು ವಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts