

ಪಟ್ನಾ: ತಮ್ಮ ಮಗಳ ಪ್ರೀತಿಯನ್ನು ಒಪ್ಪದ ಪೋಷಕರು ಆಕೆಯ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ಅವಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್ನಗರ ಜಿಲ್ಲೆಯಲ್ಲಿ ನಡೆದಿದೆ.
ಗಾಯಾಳು ಅಜಯ್ ಕುಮಾರ್ ಸ್ಥಿತಿ ಚಿಂತಾಜನಕವಾಗಿದ್ದು, ಕೃತ್ಯವನ್ನು ಎಸಗಿದ ಬಳಿಕ ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ. ಅವರ ಪತ್ತೆಗಾಘಿ ವಿಶೇಷ ತಂಡ ಒಂದನ್ನು ರಚಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅರ್ಜುನ್ ಹಾಗೂ ಯುವತಿ ಇಬ್ಬರು ಸಹ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಯುವತಿಯ ಕಡೆಯವರು ಹಲವು ಬಾರಿ ಎಚ್ಚರಿಸಿದ್ದರು ಇವರಿಬ್ಬರು ದೂರವಾಗಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಯುವತಿ ಕುಟುಂಬಸ್ಥರು ಆತನಿಗೆ ಸರಿಯಾದ ಬುದ್ದಿ ಕಲಿಸಲು ಸಂಚು ಹಾಕಿದ್ದರು.
ಅದರಂತೆ ಶುಕ್ರವಾರ ಬೆಳಗಿನ ಜಾವ 4:30ರ ಸುಮಾರಿಗೆ ಯುವತಿ ತನ್ನ ಪ್ರಿಯಕರನಿಗೆ ಕರೆ ಮಾಡಿದ್ದು, ತನ್ನ ತಂದೆಗೆ ಹೃದಯಾಘಾತವಾಗಿದೆ. ಆವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿದೆ ತಕ್ಷಣವೇ ನಮ್ಮ ಮನೆಗೆ ಬಾ ಎಂದು ಆಕೆಯ ಅಣ್ಣ ಹಾಗೂ ಅಪ್ಪ ಯುವತಿ ಕಡೆಯಿಂದ ಬಲವಂತೆವಾಗಿ ಕರೆ ಮಾಡಿಸಿ ಯುವಕನನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ.
ವಿಚಾರ ತಿಳಿದು ಯುವಕ ಸ್ಥಳಕ್ಕೆ ದೌಡಾಯಿಸಿದ್ದು, ಆತನ ಮೇಲೆ ಯುವತಿ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಖಾಸಗಿ ಅಂಗವನ್ನು ಕೊಯ್ದು ಇನ್ನುಮುಂದೆ ತಮ್ಮ ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿ ಪರಾರಿಯಾಗಿದ್ದಾರೆ. ಯುವಕನ ತಂದೆ ಹಾಗೂ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.