

ವಿಶಾಖಪಟ್ಟಣ: ಐಪಿಎಲ್ 2024ರ 16ನೇ ಪಂದ್ಯದಲ್ಲಿ ವೈಜಾಗ್ನಲ್ಲಿ ಮುಖಾಮುಖಿಯಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯಿತು. ಕಡೆಗೂ 106 ರನ್ಗಳಿಂದ ಡೆಲ್ಲಿಯನ್ನು ಮಣಿಸಿದ ಕೆಕೆಆರ್ ಲೀಗ್ನಲ್ಲಿ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.
ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ ಬರೋಬ್ಬರಿ 272 ರನ್ ರನ್ಗಳ ಗುರಿಯನ್ನು ಡೆಲ್ಲಿಗೆ ನೀಡಿತು. ಆದರೆ ಈ ಗುರಿಯನ್ನು ತಲುಪುವಲ್ಲಿ ಡೆಲ್ಲಿ ಬಾಯ್ಸ್ ಎಡವಿದರು. ಭಾರೀ ಅಂತರದಿಂದ ಗೆಲುವನ್ನು ಕೆಕೆಆರ್ ಮಡಿಲಿಗೆ ಡಿಸಿ ಅರ್ಪಿಸಿತು. ಕೇವಲ ಈ ಪಂದ್ಯವನ್ನು ಮಾತ್ರ ಗೆದ್ದು ಬೀಗಿದ್ದಲ್ಲದೇ, ಆರ್ಸಿಬಿ ದಾಖಲಿಸಿದ್ದ 263 ರನ್ಗಳ ದಾಖಲೆಯನ್ನು ಹಿಂದಿಕ್ಕಿದೆ.
ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 277 ರನ್ಗಳನ್ನು ಸಿಡಿಸುವ ಮೂಲಕ ಆರ್ಸಿಬಿ ದಾಖಲಿಸಿದ್ದ ಐತಿಹಾಸಿಕ ಬೃಹತ್ ರನ್ಗಳ ಮೊತ್ತವನ್ನು ಮುರಿದು ತನ್ನದೇ ಹೊಸ ರೆಕಾರ್ಡ್ ಅನ್ನು ನಿರ್ಮಿಸಿತು. ಈ ಮೂಲಕ ಕೆಕೆಆರ್ ಮೊದಲ ಸ್ಥಾನ ಗಳಿಸಿ, ಆರ್ಸಿಬಿಗೆ ಎರಡನೇ ಸ್ಥಾನ ನೀಡಿತ್ತು. ಆದರೆ, ಇದೀಗ ಕೆಕೆಆರ್ ಕೂಡ ಬೆಂಗಳೂರು ತಂಡ ಗಳಿಸಿದ್ದ ರನ್ಗಳನ್ನು ಹಿಂದಿಕ್ಕಿದ್ದು, ನಿನ್ನೆಯ ಪಂದ್ಯದಲ್ಲಿ 272 ರನ್ ಕಲೆಹಾಕುವ ಮೂಲಕ ಆರ್ಸಿಬಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.
11 ವರ್ಷಗಳ ಕಾಲ ಐಪಿಎಲ್ನಲ್ಲಿ ಅತ್ಯಧಿಕ ತಂಡದ ಸ್ಕೋರ್ ದಾಖಲೆಯನ್ನು ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಾಖಲೆಯನ್ನು ಮುರಿದ ತಂಡಗಳಲ್ಲಿ ಕೆಕೆಆರ್ ಎರಡನೇ ತಂಡವಾಗಿದೆ. ಅದು ಕೇವಲ ಒಂದೇ ವಾರದಲ್ಲಿ ಎರಡು ತಂಡಗಳು ಈ ಸಾಧನೆ ಮಾಡುವಲ್ಲಿ ಮುಂಚೂಣಿಯಲ್ಲಿದೆ.
ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ:
277/3 - SRH vs MI (ಹೈದರಾಬಾದ್, 2024)
272/7 - ಕೆಕೆಆರ್ ವಿರುದ್ಧ ಡಿಸಿ (ವಿಶಾಖಪಟ್ಟಣಂ, 2024)
263/5 - RCB vs PWI (ಬೆಂಗಳೂರು, 2013)
257/5 - LSG vs PBKS (ಮೊಹಾಲಿ, 2023)
248/3 - RCB ವಿರುದ್ಧ GL (ಬೆಂಗಳೂರು, 2016)