

NZ vs PAK : ನ್ಯೂಜಿಲೆಂಡ್ನ ಮೌಂಟ್ ಮೌಂಗನುಯಿಯಲ್ಲಿ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಕಿವೀಸ್ ಪಡೆ 43 ರನ್ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಆದಾಗ್ಯೂ, ಅಂತಿಮ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತು. ಪಾಕಿಸ್ತಾನದ ಇನ್ನಿಂಗ್ಸ್ನ 39ನೇ ಓವರ್ನಲ್ಲಿ ಜಾಕೋಬ್ ಡಫಿ ಬೌಲಿಂಗ್ ಮಾಡುತ್ತಿದ್ದಾಗ ಫ್ಲಡ್ಲೈಟ್ಗಳು ಇದ್ದಕ್ಕಿದ್ದಂತೆ ಆಫ್ ಆದವು.
ಜಾಕೋಬ್ ಡಫಿ ಬೌಲಿಂಗ್ ಮಾಡಲು ಓಡಿ ಬರುವಾಗ ಈ ಘಟನೆ ನಡೆಯಿತು. ಇದ್ದಕ್ಕಿದ್ದಂತೆ ಫ್ಲಡ್ಲೈಟ್ಗಳು ಆಫ್ ಆಗಿ ಇಡೀ ಮೈದಾನ ಕತ್ತಲೆಯಾಯಿತು. ಅಷ್ಟರಲ್ಲಾಗಲೇ ಡಫಿ ಚೆಂಡನ್ನು ಎಸೆದುಬಿಟ್ಟಿದ್ದರು. ಆದರೆ, ಸ್ಟ್ರೈಕ್ನಲ್ಲಿದ್ದ ತಯ್ಯಬ್ ತಾಹಿರ್ ತಕ್ಷಣವೇ ಬದಿಗೆ ಸರಿದಿದ್ದರು.
ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ತಾಹಿರ್ ಕ್ರೀಸ್ ಬಳಿ ನಿಂತಿದ್ದರೆ, ಚೆಂಡು ಅವರಿಗೆ ತಗುಲುತ್ತಿತ್ತು. ಇದರಿಂದ ಗಾಯವಾಗುವ ಸಾಧ್ಯತೆ ಇತ್ತು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಮಳೆಯಿಂದಾಗಿ ಈ ಪಂದ್ಯವನ್ನು 42 ಓವರ್ಗಳಿಗೆ ಸೀಮಿತಗೊಳಿಸಲಾಯಿತು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 264 ರನ್ ಗಳಿಸಿತು. ಕಿವೀಸ್ ಬ್ಯಾಟ್ಸ್ಮನ್ಗಳಲ್ಲಿ ರೈಸ್ ಮಾರಿಯೋ (58) ಮತ್ತು ಬ್ರೇಸ್ವೆಲ್ (59) ಅರ್ಧಶತಕಗಳೊಂದಿಗೆ ಮಿಂಚಿದರು. ಮಿಚೆಲ್ (49) ರನ್ಗಳೊಂದಿಗೆ ಮಿಂಚಿದರು. ನಂತರ, ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 40 ಓವರ್ಗಳಲ್ಲಿ 221 ರನ್ಗಳಿಗೆ ಆಲೌಟ್ ಆಯಿತು. (ಏಜೆನ್ಸೀಸ್)