ಏಕದಿನ ವಿಶ್ವಕಪ್ 2023| ಸ್ಯಾಂಟ್ನರ್ ಆಲ್​ರೌಂಡ್ ಆಟ, ನೆದರ್ಲೆಂಡ್ ವಿರುದ್ಧ ನ್ಯೂಜಿಲೆಂಡ್​ಗೆ 99ರನ್​ಗಳ ಜಯ

Newzealand
Published on

ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್​ಲೆಂಡ್ಸ್​ ತಂಡದ ವಿರುದ್ಧ ಆಲ್​ರೌಂಡ್ ಪ್ರದರ್ಶನ ನೀಡಿದ ನ್ಯೂಜಿಲೆಂಡ್ 99ರನ್​ಗಳ ಭರ್ಜರಿ ಜಯ ಗಳಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಡಿಲ್​ ಯಂಗ್​ (70 ರನ್, 80 ಎಸೆತ, 7 ಬೌಂಡರಿ, 2 ಸಿಕ್ಸರ್), ಟಾಮ್ ಲ್ಯಾಥಮ್​ (53 ರನ್, 46 ಎಸೆತ, 6 ಬೌಂಡರಿ, 1 ಸಿಕ್ಸರ್), ರಚಿನ್​ ರವೀಂದ್ರ (51 ರನ್, 51 ಎಸೆತ, 3 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 322ರನ್​ ಗಳಿಸಿತ್ತು.

ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್​ ತಂಡವು ಕಾಲಿನ್ ಆ್ಯಕರ್​ಮ್ಯಾನ್​ (69 ರನ್, 73 ರನ್, 5 ಬೌಂಡರಿ) ದಿಟ್ಟ ಪ್ರತಿರೋಧದ ನಡುವೆಯೂ 46.3 ಓವರ್​ಗಳಲ್ಲಿ 223ರನ್​ ಗಳಿಸಿ ಆಲೌಟ್​ ಆಯಿತು. ನ್ಯೂಜಿಲೆಂಡ್​ ಪರ ಮಿಚಲ್​ ಸ್ಯಾಂಟ್ನರ್ (36 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್, 10-0-59-50), ಮ್ಯಾಟ್​ ಹೆನ್ರಿ (8.3-0-40-3), ರಚಿನ್ ರವೀಂದ್ರ (10-0-46-1) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಮೂಲಕ ನ್ಯೂಜಿಲೆಂಡ್​ ತಂಡವು ಏಕದಿನ ವಿಶ್ವಕಪ್​ನಲ್ಲಿ ಸತತ ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಜಯದ ಓಟ ಮುಂದುವರೆಸಿದೆ. ನೆದರ್ಲೆಂಡ್ಸ್​ ತಂಡವು ಎರಡನೇ ಪಂದ್ಯದಲ್ಲೂ ಸೋಲುಂಡು ನಿರಾಸೆ ಅನುಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net