More

    ಹಮಾಸ್​ ಉಗ್ರರ ದಾಳಿ; ಇಸ್ರೇಲ್​ ಮೇಲಿನ ದಾಳಿ ಐತಿಹಾಸಿಕ ಜಯ ಎಂದ ಪಾಕಿಸ್ತಾನಿ

    ನವದೆಹಲಿ: ಇಸ್ರೇಲ್​ ಮೇಲೆ ಹಮಾಸ್​ ಉಗ್ರರು ರಾಕೆಟ್​ ದಾಳಿ ಮಾಡಿ ಅನೇಕ ಜನರ ಜೀವಗಳನ್ನು ನಡೆಸಿರುವ ಮಾರಣಾಂತಿಕ ರಾಕೆಟ್​ ದಾಳಿಯನ್ನು ಹಾಡಿ ಹೊಗಳಿರುವ ಪಾಕಿಸ್ತಾನಿ ಧಾರ್ಮಿಕ ನಾಯಕ ಹಾಗೂ ರಾಜಕಾರಣಿ ಪ್ಯಾಲೆಸ್ಟೈನ್​ನ ಕ್ರಮವನ್ನು ಬೆಂಬಲಿಸಿದ್ದು, ಇದೊಂದು ಐತಿಹಾಸಿಕ ಜಯ ಎಂದು ಬಣ್ಣಿಸಿದ್ಧಾರೆ.

    ಜಮಿಯತ್ ಉಲೇಮಾ-ಎ ಇಸ್ಲಾಂ-ಫಜಲ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಈ ರೀತಿಯ ಹೇಳಿಕೆ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಪ್ಯಾಲೆಸ್ಟೈನ್​ ವಿವಾದ ಇನ್ನು ತಣ್ಣಗಾಗಿಲ್ಲ ಎಂಬುದಕ್ಕೆ ಇಸ್ರೇಲ್​ ಮೇಲಿನ ದಾಳಿ ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ.

    ನಾವು ಇಸ್ರೇಲ್​ ಮೇಲಿನ ದಾಳಿಯನ್ನು ಸ್ವಾಗತಿಸಿದ್ದು, ಈ ವಿಚಾರದಲ್ಲಿ ನಾವು ಪ್ಯಾಲೆಸ್ಟೈನ್​ನ ನಮ್ಮ ಸಹೊದರರ ಜತೆಗೆ ನಿಲ್ಲುತ್ತೇವೆ. ಇಸ್ರೇಲ್​ ವಿರುದ್ಧ ಪ್ಯಾಲೆಸ್ಟೈನ್​ ನಡೆಸಿದ ಯುದ್ಧ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಇಸ್ರೇಲ್​ನ ವಶದಲ್ಲಿದ್ದ ಹಲವು ಪ್ರದೇಶಗಳನ್ನು ನಮ್ಮ ಪ್ಯಾಲೆಸ್ಟೈನ್​ನ ಸಹೋದರರು ಮುಕ್ತಗೊಳಿಸಿದ್ದಾರೆ.

    ಇದನ್ನೂ ಓದಿ: ರಾಜಸ್ಥಾನ ವಿಧಾನಸಭೆ ಚುನಾವಣೆ| ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ಮಾಜಿ ಸಿಎಂ ವಸುಂಧರಾಗೆ ಶಾಕ್

    ನಮ್ಮಲ್ಲಿನ ಒಂದು ಗುಂಪು ಇಸ್ರೇಲ್​ಅನ್ನು ಗುರತಿಸಲು ವಿಫಲವಾಯಿತು. ಆದರೆ, ಇತ್ತೀಚಿಗೆ ನಡೆದ ಯುದ್ಧವು ಪ್ಯಾಲೆಸ್ಟ್ಐನ್​ ವಿವಾದವು ಇನ್ನೂ ಸತ್ತಿಲ್ಲ ಎಂದು ನಿರೂಪಿಸಿದೆ. ಇಸ್ರೇಲ್​ ಮೇಲೆ ಪ್ಯಾಲೆಸ್ಟ್ಐನ್​ ನಡೆಸಿದ ದಾಳಿಯೂ ಅಲ್ಲಿಯ ರಕ್ಷಣಾ ವ್ಯವಸ್ಥೆ ಹಾಗೂ ಅದರ ದುರಹಂಕಾರವನ್ನು ಅಡಗಿಸುವಲ್ಲಿ ಪ್ಯಾಲೆಸ್ಟೈನ್​ನ ನಮ್ಮ ಸಹೋದರು ಯಶಸ್ವಿಯಾಗಿದ್ದಾರೆ ಎಂದು ಜಮಿಯತ್ ಉಲೇಮಾ-ಎ ಇಸ್ಲಾಂ-ಫಜಲ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ಧಾರೆ.

    ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಮನುಷ್ಯತ್ವ ಇರುವವರು ಯಾರು ಸಹ ಈ ರೀತಿಯ ಹೇಳಿಕೆಗಳನ್ನು ಕೊಡುವುದಿಲ್ಲ ಎಂದು ಹಲವರು ಕಿಡಿಕಾರಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts