ಪಂಚರಾಜ್ಯ ಚುನಾವಣೆ ದಿನಾಂಕ ಘೊಷಣೆಯೊಂದಿಗೆ ಬಿಜೆಪಿಯ ವಿದಾಯಕ್ಕೆ ಮುಹೂರ್ತ ಫಿಕ್ಸ್: ಮಲ್ಲಿಕಾರ್ಜುನ ಖರ್ಗೆ

Mallikarjun Kharge
Published on

ನವದೆಹಲಿ: ವರ್ಷಾಂತ್ಯದಲ್ಲಿ ನಡೆಯುವ ಪಂಚರಾಜ್ಯ ಚುನಾವಣೆ ದಿನಾಂಕ ಘೊಷಣೆಯಾಗುವದರೊಂದಿಗೆ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ವಿದಾಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಐದು ರಾಜ್ಯಗಲ ಚುನಾವಣೆ ಘೋಷಣೆಯಾಗುವದರೊಂದಿಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿದಾಯದ ಘೋಷಣೆ ಸಹ ಆಗಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಬಲದಿಂದ ಜನರ ಬಳಿಗೆ ಹೋಗಲಿದೆ.

ಸಾರ್ವಜನಿಕರ ಕಲ್ಯಾಣ, ಸಾಮಾಜಿಕ ನ್ಯಾಯ, ಪ್ರಗತಿಪರ ಅಭಿವೃದ್ಧಿ ಕಾಂಗ್ರೆಸ್​ ಪಕ್ ಜನರಿಗೆ ನೀಡುತ್ತಿರುವ ಭರವಸೆಗಳು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಚುನಾವಣಾ ಆಯೋಗ ಮದ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನ, ಮಿಜೋರಾಂ ಹಾಗೂ ತೆಲಂಗಾಣಕ್ಕೆ ಚುನಾವಣೆಯ ದಿನಾಂಕಗಳನ್ನು ಸೋಮವಾರ ಘೋಷಣೆ ಮಾಡಿದೆ. ನವೆಂಬರ್​ 7ರಿಂದ 30ನೇ ತಾರೀಖಿನವರೆಗೂ ವಿವಿಧ ದಿನಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್​ 3ರಂದು ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆ ಚುನಾವಣೆಗೂ ನಡೆಯುವ ಪಂಚರಾಜ್ಯ ಎಲೆಕ್ಷನ್​ ಅನ್ನು ಸೆಮಿಫೈನಲ್​ ಎಂದು ಬಿಂಬಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net