

ನವದೆಹಲಿ: 13ನೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡಲು ಸಜ್ಜಾಗಿರುವ 6 ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಝೆಡ್‌ಸಿ) ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವುದಾಗಿ ಹೇಳಿದೆ. ಆದರೆ, ಆಟಗಾರರೇ ಆರೋಗ್ಯದ ಸುರಕ್ಷತೆ ಬಗ್ಗೆ ತಾವೇ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ನ್ಯೂಜಿಲೆಂಡ್‌ನ ಜಿಮ್ಮಿ ನೀಶಾಮ್ (ಕಿಂಗ್ಸ್ಇಲೆವೆನ್ ಪಂಜಾಬ್), ಲೂಕಿ ಫರ್ಗ್ಯೂಸನ್ (ಕೆಕೆಆರ್), ಮಿಚೆಲ್ ಮೆಕ್ಲೀನಘನ್ ಹಾಗೂ ಟ್ರೆಂಟ್ ಬೌಲ್ಟ್ (ಮುಂಬೈ ಇಂಡಿಯನ್ಸ್), ಕೇನ್ ವಿಲಿಯಮ್ಸನ್ (ಸನ್‌ರೈಸರ್ಸ್) ಹಾಗೂ ಮಿಚೆಲ್ ಸ್ಯಾಂಟ್ನರ್ (ಸಿಎಸ್‌ಕೆ) ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರು. ‘ಐಪಿಎಲ್‌ನಲ್ಲಿ ಆಡಲು ಆಟಗಾರರಿಗೆ ಎನ್‌ಒಸಿ ನೀಡಲಾಗಿದೆ. ಸುರಕ್ಷತೆ ಅವರಿಗೆ ಬಿಟ್ಟಿದ್ದು’ ಎಂದು ಎನ್‌ಝೆಡ್‌ಸಿ ವಕ್ತಾರ ರಿಚರ್ಡ್ ಬೂಕ್ ತಿಳಿಸಿದ್ದಾರೆ.