More

    ಚಾಹಲ್​ 30ನೇ ಬರ್ತ್​ಡೇಗೆ ಕಾಲೆಳೆಯುತ್ತಲೇ ಶುಭಾಶಯ ಹೇಳಿದ ಯುವರಾಜ್​

    ಬೆಂಗಳೂರು: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದ ಮೊದಲ ಭಾರತೀಯ ಬೌಲರ್​ ಎಂಬ ಹೆಗ್ಗಳಿಕೆ ಹೊಂದಿರುವ ಸ್ಪಿನ್ನರ್​ ಯಜುವೇಂದ್ರ ಚಾಹಲ್​ಗೆ ಗುರುವಾರ 30ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಾಹಲ್​ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ನಡುವೆ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್ ಅವರ ವಿಶೇಷ ರೀತಿಯ ಶುಭಾಶಯದ ಸಂದೇಶ ಎಲ್ಲರ ಗಮನ ಸೆಳೆದಿದೆ. ಹಾಗಾದರೇ ಅವರ ಶುಭಾಶಯದಲ್ಲಿ ಏನಿದೆ ಸ್ಪೆಷಲ್​ ಗೊತ್ತೇ?

    ‘ಯುಜಿ ಚಾಹಲ್​ ಅಥವಾ ನಾನು ನಿನನ್ನು ಮಿ. ಚುಹಾ (ಇಲಿ) ಎಂದು ಕರೆಯಲೇ. ನೀನು ಸ್ವಲ್ಪ ತೂಕ ಹೆಚ್ಚಿಸಿಕೋ ಎಂದು ವಿಶೇಷವಾಗಿ ಶುಭ ಹಾರೈಸುವೆ. ನಿನ್ನ ತಮಾಷೆಯ ವಿಡಿಯೋ ಮತ್ತು ಕಮೆಂಟ್​ಗಳಿಂದ ನಮ್ಮನ್ನು ಮನರಂಜಿಸುತ್ತಿರು. ಮುಂದಿನ ವರ್ಷಗಳಲ್ಲಿ ನಿನಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಹ್ಯಾಪಿ ಬರ್ತ್​ಡೇ ಯಜುವೇಂದ್ರ ಚಾಹಲ್​’ ಎಂದು ಯುವರಾಜ್​ ಸಿಂಗ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಚಾಹಲ್​ ಜತೆಗಿನ ತಮಾಷೆಯ ಸಮಯದ ಚಿತ್ರವನ್ನು ಪ್ರಕಟಿಸಿದ್ದಾರೆ. ತೆಳ್ಳಗಿನ ದೇಹದ ಚಾಹಲ್​ಗೆ ದಪ್ಪಗಾಗುವಂತೆ ಯುವಿ ಶುಭ ಹಾರೈಸಿರುವುದು ಎಲ್ಲರ ಗಮನ ಸೆಳೆದಿದೆ.

    ಇದನ್ನೂ ಓದಿ: ತಾಯ್ತನದ ಬಳಿಕ ಟೋಕಿಯೊ ಒಲಿಂಪಿಕ್ಸ್​ನತ್ತ ಗೀತಾ ಪೋಗಟ್​ ಗಮನ

    ಟೀಮ್​ ಇಂಡಿಯಾ ಆಟಗಾರರಿಂದ ಶುಭಾಶಯಗಳ ಸುರಿಮಳೆ
    ಲಾಕ್​ಡೌನ್​ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ತಮಾಷೆಯ ವಿಡಿಯೋ, ಕಮೆಂಟ್​ಗಳ ಮೂಲಕ ಗಮನ ಸೆಳೆಯುತ್ತ ಬಂದಿರುವ​ ಚಾಹಲ್​ 30ನೇ ಬರ್ತ್​ಡೇಗೆ ಟೀಮ್​ ಇಂಡಿಯಾದ ಹಾಲಿ-ಮಾಜಿ ಆಟಗಾರರು ಮತ್ತು ಕೋಚ್​ ರವಿಶಾಸ್ತ್ರಿ ಶುಭಾಶಯ ತಿಳಿಸಿದ್ದಾರೆ. ಚಾಹಲ್​ ಅವರ ಸ್ಪಿನ್​ ಬೌಲಿಂಗ್​ ಜತೆಗಾರರಾಗಿರುವ ಚೈನಾಮನ್​ ಬೌಲರ್​ ಕುಲದೀಪ್​ ಯಾದವ್​ ಮೊದಲಿಗರಾಗಿ ಚಾಹಲ್​ಗೆ ಶುಭಾಶಯ ತಿಳಿಸಿದ್ದು, ‘ನನಗೆ ಉತ್ತಮ ಸಾಥ್​ ನೀಡುತ್ತ ಬಂದಿರುವ ಜತೆಗಾರನಿಗೆ ಜನ್ಮದಿನದ ಶುಭಾಶಯಗಳು. ಮೈದಾನದೊಳಗೆ ಮತ್ತು ಹೊರಗೆ ನನ್ನ ಸಹೋದರನಾಗಿರುವೆ. ಆರೋಗ್ಯ, ಸಂತೋಷ, ಯಶಸ್ಸು ಮತ್ತು ಹೆಚ್ಚಿನ ವಿಕೆಟ್​ಗಳು ನಿನ್ನದಾಗಲಿ’ ಎಂದು ಟ್ವೀಟಿಸಿದ್ದಾರೆ. ಸುರೇಶ್​ ರೈನಾ, ಹರ್ಭಜನ್​ ಸಿಂಗ್​, ಶ್ರೇಯಸ್​ ಅಯ್ಯರ್​, ಮೊಹಮದ್​ ಶಮಿ ಮುಂತಾದವರು ಚಾಹಲ್​ಗೆ ಶುಭಾಶಯ ತಿಳಿಸಿದ್ದಾರೆ. ಬಿಸಿಸಿಐ ಕೂಡ ಚಾಹಲ್​ ವಿಶೇಷ ಸಾಧನೆಗಳನ್ನು ಮೆಲುಕುಹಾಕುತ್ತ ಶುಭಾಶಯ ಹೇಳಿದೆ.

    ಭಾರತ ಪರ ಇದುವರೆಗೆ 52 ಏಕದಿನ ಪಂದ್ಯಗಳಲ್ಲಿ 91 ಮತ್ತು 42 ಟಿ20 ಪಂದ್ಯಗಳಲ್ಲಿ 55 ವಿಕೆಟ್​ ಕಬಳಿಸಿರುವ ಆರ್​ಸಿಬಿ ಆಟಗಾರ ಚಾಹಲ್​, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 6 ವಿಕೆಟ್​ ಗೊಂಚಲು ಪಡೆದ ವಿಶ್ವದ 2ನೇ ಬೌಲರ್​ ಎನಿಸಿದ್ದಾರೆ. ಚೆಸ್​ ಆಟಗಾರರೂ ಆಗಿದ್ದ ಚಾಹಲ್​, ವಿಶ್ವ ಯೂತ್​ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts