More

    ಇನ್​ಸ್ಟಾಗ್ರಾಂನಲ್ಲಿ 1000ನೇ ಪೋಸ್ಟ್​ ವಿಶೇಷವಾಗಿ ಸಂಭ್ರಮಿಸಿದ ವಿರಾಟ್​ ಕೊಹ್ಲಿ

    ಬೆಂಗಳೂರು: ಕ್ರಿಕೆಟ್​ ಆಟ ಮತ್ತು ಜಾಹೀರಾತುಗಳ ಜತೆಜತೆಯಲ್ಲೇ ಇನ್​ಸ್ಟಾಗ್ರಾಂ ಪೋಸ್ಟ್​ಗಳ ಮೂಲಕವೂ ಹಣ ಸಂಪಾದನೆ ಮಾಡುತ್ತ ಬಂದಿರುವ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ತಮ್ಮ 1000ನೇ ಪೋಸ್ಟ್​ ಅನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ವರ್ಷಗಳ ಕಾಲ ಆಡುತ್ತ ಸಾಕಷ್ಟು ಕಲಿತಿರುವೆ ಎಂದು ಅವರು ಈ ಪೋಸ್ಟ್​ ಮೂಲಕ ತಿಳಿಸಿದ್ದು, ತಮ್ಮೊಂದಿಗೆ ತಾವೇ ಬ್ಯಾಟಿಂಗ್​ ಮಾಡುತ್ತಿರುವ ರೀತಿಯಲ್ಲಿ ತಮ್ಮದೇ 2 ಚಿತ್ರಗಳು ಎಡಿಟ್​ ಮಾಡಿ ಪ್ರಕಟಿಸುವ ಮೂಲಕ ಗಮನಸೆಳೆದಿದ್ದಾರೆ.

    ‘2008-2020. ಈ ದಾರಿಯಲ್ಲಿ ಸಾಕಷ್ಟು ಕಲಿತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಇದು ನನ್ನ 1000ನೇ ಪೋಸ್ಟ್​’ ಎಂದು ವಿರಾಟ್​ ಕೊಹ್ಲಿ ಗುರುವಾರದ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಇದರಲ್ಲಿ ಅವರು 2008ರಲ್ಲಿ ತಾವು ಪದಾರ್ಪಣೆ ಮಾಡಿದ ಸಮಯದ ಬ್ಯಾಟಿಂಗ್​ ಚಿತ್ರ ಮತ್ತು ಈಗ ಟೀಮ್​ ಇಂಡಿಯಾ ನಾಯಕರಾಗಿರುವ ಸಮಯದ ಬ್ಯಾಟಿಂಗ್​ ಚಿತ್ರಗಳನ್ನು ವಿಲೀನ ಮಾಡಿದ್ದಾರೆ. ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಸರ್ವಾಧಿಕ 69.4 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಭಾರತೀಯರಾಗಿದ್ದಾರೆ. ಇನ್​ಸ್ಟಾಗ್ರಾಂನ ವಾಣಿಜ್ಯ ಪೋಸ್ಟ್​ಗಳ ಮೂಲಕ ಅತ್ಯಧಿಕ ಹಣ ಸಂಪಾದನೆ ಮಾಡುತ್ತಿರುವ ವಿಶ್ವ ಅಗ್ರ 10 ಕ್ರೀಡಾಪಟುಗಳ ಪಟ್ಟಿಯಲ್ಲಿ ಅವರು ಏಕೈಕ ಕ್ರಿಕೆಟಿಗರಾಗಿದ್ದಾರೆ.

    ಇದನ್ನೂ ಓದಿ: ಚಾಹಲ್​ 30ನೇ ಬರ್ತ್​ಡೇಗೆ ಕಾಲೆಳೆಯುತ್ತಲೇ ಶುಭಾಶಯ ಹೇಳಿದ ಯುವರಾಜ್

    31 ವರ್ಷದ ವಿರಾಟ್​ ಕೊಹ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರವೇಶಿಸಿದ್ದರು. ಇದುವರೆಗೆ 86 ಟೆಸ್ಟ್​, 248 ಏಕದಿನ ಮತ್ತು 82 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 7240, 11867 ಮತ್ತು 2794 ರನ್​ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕಗಳನ್ನೂ (ಟೆಸ್ಟ್​ನಲ್ಲಿ 27, ಏಕದಿನದಲ್ಲಿ 43)ಸಿಡಿಸಿದ್ದು, ಐಸಿಸಿ ರಾಂಕಿಂಗ್​ನಲ್ಲಿ ಈಗ ಏಕದಿನದಲ್ಲಿ ನಂ. 1, ಟೆಸ್ಟ್​ನಲ್ಲಿ ನಂ. 2 ಮತ್ತು ಟಿ20ಯಲ್ಲಿ ನಂ. 10 ಬ್ಯಾಟ್ಸ್​ಮನ್​ ಆಗಿದ್ದಾರೆ.

    2030ರವರೆಗೆ ಮುಂದುವರಿಯಿರಿ ಎಂದ ಹರ್ಭಜನ್​
    ಇನ್​ಸ್ಟಾಗ್ರಾಂ ಪೋಸ್ಟ್​ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ವರ್ಷ ಪೂರೈಸಿರುವುದನ್ನು ನೆನಪಿಸಿಕೊಂಡಿರುವ ವಿರಾಟ್​ ಕೊಹ್ಲಿಗೆ 2030ರವರೆಗೂ ಮುಂದುವರಿಯುವಂತೆ ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಶುಭಹಾರೈಸಿದ್ದಾರೆ. 2008ರಲ್ಲಿ 19 ವಯೋಮಿತಿ ವಿಶ್ವಕಪ್​ ಜಯಿಸಿದ ಬೆನ್ನಲ್ಲೇ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರವೇಶಿಸಿದ್ದರು.
    ಕೊಹ್ಲಿ ಪೋಸ್ಟ್​ಗೆ ನಟ ಡ್ಯಾನಿಷ್​ ಸೇಠ್​ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು, ಕಳೆದ ರಾತ್ರಿ ಕುಡಿದ ನಶೆ ಇನ್ನೂ ಇಳಿದಿಲ್ಲ ಎಂದು ಭಾವಿಸಿದ್ದೆ. ಇಲ್ಲ, ನಿಜಕ್ಕೂ ಚಿತ್ರದಲ್ಲಿ ಇಬ್ಬರು ವಿರಾಟ್​ ಇದ್ದಾರೆ ಎಂದು ಕಮೆಂಟ್​ ಹಾಕಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಕೂಡ 2 ಹೃದಯದ ಇಮೋಜಿಗಳ ಮೂಲಕ ಈ ಪೋಸ್ಟ್​ಗೆ ಕಮೆಂಟ್​ ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts