KL Rahul ಅಲ್ಲವೇ ಅಲ್ಲ... ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಯಾರು ಎಂಬುದನ್ನು ರಿವೀಲ್​ ಮಾಡಿದ RCB ಕೋಚ್

Delhi Capitals
Published on

ನವದೆಹಲಿ: 18ನೇ ಆವೃತ್ತಿಯ ಐಪಿಎಲ್​ ಆರಂಭವಾವುದಕ್ಕೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ತಂಡಗಳು ತಯಾರಿಯನ್ನು ಆರಂಭಿಸಿವೆ. 2024ರ ನವೆಂಬರ್ ಅಂತ್ಯದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ರಾಹುಲ್​, ಫಾಫ್​ ಡು ಪ್ಲೆಸಿಸ್​ ಸೇರಿದಂತೆ ಒಳ್ಳೆಯ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದ್ದು, ಈ ಬಾರಿ ಕಪ್​ ಗೆಲ್ಲುವ ಮುನ್ಸೂಚನೆಯನ್ನು ನೀಡಿದೆ.

ಇನ್ನೂ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕನಾಗಿದ್ದ ರಿಷಭ್​ ಪಂತ್​ ಮೆಗಾ ಹರಾಜಿನಲ್ಲಿ ಲಖನೌ ಸೂಪರ್​ಜೈಂಟ್ಸ್​ ಪಾಲಾಗಿದ್ದು, ರಿಷಬ್​ ಎಲ್​ಎಸ್​ಜಿ ತಂಡವನ್ನು ಮುನ್ನಡೆಸುವುದು ಖಾತ್ರಿಯಾಗಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ವಿಚಾರಕ್ಕೆ ಆರ್​ಸಿಬಿ (RCB) ಬ್ಯಾಟಿಂಗ್​ ಕೋಚ್​ ಹಾಗೂ ಮೆಂಟರ್​ ದಿನೇಶ್​ ಕಾರ್ತಿಕ್​ ತೆರೆ ಎಳೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಯಾರೆಂದು ರಿವೀಲ್​ ಮಾಡಿದ್ದಾರೆ.

Dinesh Karthik

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ದಿನೇಶ್​ ಕಾರ್ತಿಕ್ (RCB Batting COach), ಭಾರತದ ಉಒನಾಯಕನಾಗಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್​ ಅವರಿಗೆ ಅಭಿನಂದನೆಗಳು. ಇದು ಅವರಿಗೆ ಉತ್ತಮ ಅವಕಾಶವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರೂ ಆಗಲಿದ್ದಾರೆ. ಹೀಗಾಗಿ ಅವರಿಗೆ ದಾರಿ ತೋರಲು ಇಲ್ಲಿ ಉತ್ತಮ ಅವಕಾಶ ಒದಗಿ ಬಂದಿದೆ. ಅವರು ಗುಜರಾತ್‌ಗಾಗಿಯೂ ಅದನ್ನು ಮಾಡುತ್ತಿದ್ದಾರೆ. 

2019ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಭಾಗವಾಗಿರುವ ಅಕ್ಷರ್​ ಪಟೇಲ್​ರನ್ನು 16.50 ಕೋಟಿ ರೂಪಾಯಿಗೆ ರಿಟೇನ್​ ಮಾಡಲಾಗಿತ್ತು. ಆರು ವರ್ಷಗಳ ಕಾಲ ತಂಡದ ಭಾಗವಾಗಿರುವ ಅಕ್ಷರ್​ ಪಟೇಲ್​ರಿಗೆ ಈಗಾಗಲೇ ಫ್ರಾಂಚೈಸಿ ನಾಯಕತ್ವ ವಹಿಸಿದೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಅಕ್ಷರ್ ಪಟೇಲ್​ಗೂ ಮೊದಲು ಫಾಫ್​ ಡು ಪ್ಲೆಸಿಸ್​ ಹಾಗೂ ಕೆ.ಎಲ್. ರಾಹುಲ್​ ಅವರು ಹೆಸರುಗಳು ನಾಯಕತ್ವಕ್ಕೆ ಕೇಳಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net