ಸಚಿನ್​ ತೆಂಡೂಲ್ಕರ್​ ನಿರ್ಧರಿಸಿದಂತೆ... Rohit Sharma ನಿವೃತ್ತಿಯ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಆಟಗಾರ

Rohit Sharma
Published on

ಮುಂಬೈ: ಈಚೆಗೆ ಮುಕ್ತಾಯಗೊಂಡ ಬಾರ್ಡರ್​ ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ನಾಯಕತ್ವದ ವಿಚಾರಕ್ಕೂ ಬರುವುದಾದರೆ ತಂಡ ಸರಣಿಗಳನ್ನು ಸೋಲುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡುತ್ತಿದ್ದು, ರೋಹಿತ್​ ಶರ್ಮ (Rohit Sharma) ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಚಾಂಪಿಯನ್ಸ್​ ಟ್ರೋಫಿ ಬಳಿಕ ಈ ಬಗ್ಗೆ ನಿರ್ಧಾರವಾಗಲಿದ್ದು, ಈ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಮಾತನಾಡಿದ್ದಾರೆ.

ಸ್ಟಾರ್​ ಸ್ಫೋರ್ಟ್ಸ್​ ಪಾಡ್​ಕಾಸ್ಟ್​ನಲ್ಲಿ ಈ ಬಗ್ಗೆ ಮಾತನಾಡಿರುವ ಸಂಜಯ್, ನನ್ನ ಪ್ರಕಾರ ಟೀಮ್​ ಇಂಡಿಯಾದಲ್ಲಿ ತೆಂಡೂಲ್ಕರ್ ರೀತಿ ರೋಹಿತ್​ ಶರ್ಮ (Rohit Sharma) ಅವರ ಭವಿಷ್ಯವನ್ನು ನಿರ್ಧರಿಸುತ್ತಾರೆ ಎಂದು ನಾನು ನಂಬುತ್ತೇನೆ. ನಿವೃತ್ತಿ ಪಡೆಯುವುದು ಆಟಗಾರನ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಎಷ್ಟು ಸಮಯ ಆಡುತ್ತೀರಿ ಮತ್ತು ಏನು ಕೊಡುಗೆ ನೀಡುತ್ತೀರಿ ಎಂಬುದು ಅವರಿಗೆ ಬಿಟ್ಟದ್ದು. ಅಂತಿಮವಾಗಿ ಆಯ್ಕೆ ಸಮಿತಿ ಏನು ನಿರ್ಧರಾದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಚಾಂಪಿಯನ್ಸ್​ ಟ್ರೋಫಿಗೆ ಸಂಬಂಧಿಸಿದಂತೆ ಬಿಸಿಸಿಐ ಜನವರಿ 18ರಂದು ತಂಡ ಪ್ರಕಟಿಸುವುದಾಗಿ ಘೋಷಿಸಿದ್ದು, ಕ್ರೀಡಾಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಯಲಿದ್ದು, ಅಜಿತ್​ ಅಗರ್ಕರ್​ ಹಾಗೂ ರೋಹಿತ್ ಶರ್ಮ (Rohit Sharma) ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಗೌತಮ್​ ಗಂಭೀರ್​ ಪಾಲ್ಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನೂ ಆಟಗಾರರ ಮೇಲೆ ದೂರು ಕೇಳಿ ಬಂದ ಹಿನ್ನೆಲೆ ಬಿಸಿಸಿಐ 10 ಅಂಶಗಳ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆಟಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೋಚ್​ ಗೌತಮ್​ ಗಂಭೀರ್​ ಹಾಗೂ ಆಟಗಾರರ ನಡುವಿನ ವೈಮಸಸ್ಸು ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದ್ದು, ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net