

ಮುಂಬೈ: ಭಾರೀ ಹೈಪ್ನೊಂದಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಗೌತಮ್ ಗಂಭೀರ್ (Gautam Gambhir) ಪ್ರಸ್ತುತ ಕಠಿಣ ಸಮಯವನ್ನು ಎದುರಿಸುತ್ತಿದ್ದು, ಅವರ ಕೋಚಿಂಗ್ ಅವಧಿಯಲ್ಲಿ ಟೀಮ್ ಇಂಡಿಯಾ ಸರಣಿಗಳನ್ನು ಸೋಲುವ ಮೂಲಕ ಕಳಪೆ ದಾಖಲೆಗಳಿಗೆ ಕೊರಳೊಡ್ಡಿದೆ. ದೊಡ್ಡ ದೊಡ್ಡ ಟೂರ್ನಿಗಳು ಸಮೀಪಿಸುತ್ತಿರುವ ನಡುವೆಯೇ ತಂಡದ ಕಳಪೆ ಪ್ರದರ್ಶನ ಆಡಳಿತ ಮಂಡಳಿಯನ್ನು ಚಿಂತೆಗೆ ದೂಡಿದ್ದು, ಚಾಂಪಿಯನ್ಸ್ ಟ್ರೋಫಿ (Champions Trophy) ಬಳಿಕ ಗೌತಮ್ ಗಂಭೀರ್ರನ್ನು ಕೋಚ್ ಸ್ಥಾನದಿಂದ ವಜಾ ಮಾಡಲಾಗುತ್ತದೆ ಎಂಬ ಮಾತುಗಳಿ ಕೇಳಿ ಬರುತ್ತಿರುವ ನಡುವೆಯೇ ಮಾಜಿ ಕ್ರಿಕೆಟಿಗರೊಬ್ಬರು ಶಾಕಿಂಗ್ ವಿಚಾರವನ್ನು ಬಯಲು ಮಾಡಿದ್ದಾರೆ.
ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ರನ್ನು (Gautam Gambhir) ವಜಾ ಮಾಡುವ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತನಾಡಿದ್ದು, ಈ ಬಾರಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸಾಮಾನ್ಯವಲ್ಲ. ಇದು ಹೊಸ ಯುಗದ ಆರಂಭವನ್ನು ಗುರತಿಸಿದ್ದು, ಈ ಬಾರಿ, ಇದು ಪರಿವರ್ತನೆಯ ಹಿನ್ನಲೆಯಾಗಿದೆ. ನನಗೆ ಅನಿಸುವ ಮಟ್ಟಿಗೆ ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಗೌತಮ್ ಗಂಭೀರ್ರನ್ನು ಕೋಚ್ ಸ್ಥಾನದಿಂದ ಇಳಿಸಬಹುದು ಎಂದು ಭಾವಿಸುತ್ತೇನೆ.
ಆತ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಂಡದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಪ್ರಮುಖ ಟೂರ್ನಿಗಳಲ್ಲಿ ಸೋಲುಂಡಿದೆ. ಆದರೆ, ಗಂಭೀರ್ ವಿಚಾರದಲ್ಲಿ ಬಿಸಿಸಿಐ ಪರಿವರ್ತನೆಯನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಆತನ ಪಾಲಿಗೆ ನಿರ್ಣಾಯಕವಾಗಿದೆ. ತಂಡದ ಜೊತೆಗೆ ಕೋಚ್ ಪ್ರದರ್ಶನವನ್ನು ಬಿಸಿಸಿಐ ಪರಾಮಾರ್ಶಿಸುತ್ತದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗೌತಮ್ ಗಂಭೀರ್ (Gautam Gambhir) ಕೋಚ್ ಆಗಿ ಅಧಿಕಾರಿ ವಹಿಸಿಕೊಂಡ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಉತ್ತಮ ವಾತಾವರಣವಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ದ್ರಾವಿಡ್ ಹಾಗೂ ರವಿಶಾಸ್ತ್ರಿ ಇದ್ದ ಸಮಯಕ್ಕಿಂತಲೂ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಯಕ ರೋಹಿತ್ ಶರ್ಮ ಆಟಗಾರರ ಆಯ್ಕೆ ಸಂಬಂಧ ಮುಂಚೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಗಂಭೀರ್ ಕೋಚ್ ಆದ ಬಳಿಕ ರೋಹಿತ್ ಶರ್ಮ ಅನೇಕ ಬಾರಿ ಆಟಗಾರರೊಂದಿಗೆ ಸಂವಹಿಸಿಲ್ಲ ಎಂದು ತಿಳಿದು ಬಂದಿದ್ದು, ಈ ಬೆಳವಣಿಗೆ ತಂಡದ ಪಾಲಿಗೆ ಸಾಕಷ್ಟು ಅಪಾಯಕಾರಿಯಾಗಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.