

ಪ್ರಯಾಗ್ರಾಜ್: ಜನವರಿ 13ರಿಂದ ಪ್ರಯಾಗ್ರಾಜ್ನಲ್ಲಿ ಆರಂಭವಾಗಿರುವ ಮಹಾಕುಂಭಮೇಳವು (Maha Kumbh Mela) ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಪ್ರತಿನಿತ್ಯ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಜನಸಮೂಹ ಯಾವ ರೀತಿ ಬರುತ್ತಿದೆ ಎಂದರೆ ಜನಮರುಳೋ ಜಾತ್ರೆ ಮರುಳೋ ಎಂಬರ್ಥದಲ್ಲಿ ಭಾಸವಾಗುತ್ತಿದೆ. ಆದರೆ, ಇದನ್ನೇ ದುರುಪಯೋಗಪಡಿಸಿಕಕೊಳ್ಳುತ್ತಿರುವ ಕೆಲವು ದುರುಳರು ಕಳ್ಳತಯನ ಮಾಡುತ್ತಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದೀಗ ಮಹಾಕುಂಭಮೇಳ (Maha Kumbh Mela) ನಡೆಯುತ್ತಿರುವ ಜಾಗದಲ್ಲಿ ಕಳ್ಳನೋರ್ವ ರಿಪೋರ್ಟರ್ ಒಬ್ಬರ ಬಳಿ ಮೈಕ್ಅನ್ನು ಕಿತ್ತುಕೊಂಡು ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಕಳ್ಳನ ನಡೆಗೆ ಕಿಡಿಕಾರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಖಾಸಗಿ ಸುದ್ದಿ ವಾಹಿನಿಯ ರಿಪೋರ್ಟರ್ ಒಬ್ಬರು ಮಹಾಕುಂಭಮೇಳಕ್ಕೆ ಭೇಟಿ ನೀಡಿದ ಭಕ್ತರನ್ನು ಮಾತನಾಡಿಸುತ್ತಿದ್ದರು. ಭಕ್ತರೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದ ಸಂದರ್ಭ ಕಳ್ಳನೋರ್ವ ಅಲ್ಲಿಗೆ ಬಂದಿದ್ದು, ರಿಪೋರ್ಟರ್ ಕೈನಲ್ಲಿದ್ದ ಮೈಕ್ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕೂಡಲೇ ಆತನನ್ಜು ಹಿಡಿಯಲು ಪ್ರಯತ್ನಿಸಿದರಾದರೂ ಆತ ಜನಸಂದಣಿಯಲ್ಲಿ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದಾನೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಮಹಾಕುಂಭಮೇಳದಲ್ಲಿ (Maha Kumbh Mela) ಅನೇಕ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈವರೆಗೂ ಒಂದು ಪ್ರಕರಣವನ್ನು ಪೊಲೀಸರು ಭೇದಿಸಿಲ್ಲ. ಇದೀಗ ರಿಪೋರ್ಟರ್ ಬಳಿ ಮೈಕ್ ಕಿತ್ತುಕೊಂಡು ಹೋಗಿದ್ದು, ಪೊಲೀಸರು ಎಚ್ಚೆತ್ತುಕೊಂಡರೆ ಒಳಿತು ಎಂದು ನೆಟ್ಟಿಗರು ಕಮೆಂಟ್ ಹಾಕಿದ್ದಾರೆ.