

ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ಈಗಾಗಲೇ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ಭಾರತ ಹಾಗೂ ಪಾಕಿಸ್ತಾನದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭದ್ರತೆಯ (Security) ಕಾರಣ ನೀಡಿ ಈಗಾಗಲೇ ಭಾರತ (India) ಪಾಕ್ (Pakistan) ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದು, ಹೈಬ್ರಿಡ್ ಮಾದರಿಯಲ್ಲಿ (Hybrid Model) ನಡೆಸುವಂತೆ ಪಟ್ಟು ಹಿಡಿದಿದೆ. ಭಾರತದ ಹಠಕ್ಕೆ ಜಗ್ಗದ ಪಾಕ್ ನಿರ್ಧಾರವನ್ನು ತಿಳಿಸುವಂತೆ ಐಸಿಸಿ ಅಂಗಳಕ್ಕೆ ಚೆಂಡನ್ನು ಎಸೆದಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ (Diplomatic) ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಪಾಕ್ ಕಳೆದ 12 ವರ್ಷಗಳಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು (Bi Lateral) ಆಡಿಲ್ಲ. ಐಸಿಸಿ (ICC) ಹಾಗೂ ಏಷ್ಯಾಕಪ್ (Asia Cup) ಟೂರ್ನಿಗಳಲ್ಲಿ ಮುಖಾಮುಖಿಯಾಗುತ್ತಿದ್ದು, ಇದರಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ (Champions Trophy) ವಿಚಾರವಾಗಿ ಹೊಸದೊಂದು ಸುದ್ದಿ ಕೇಳಿ ಬಂದಿದ್ದು, ಭಾರತ ಭಾಗಿಯಾಗೋದು ಕನ್ಫರ್ಮ್ ಎಂದು ಹೇಳಲಾಗಿದೆ.
ಇದನ್ನೂ ಓದಿ: Jammu-Kashmir| ಇಬ್ಬರು ಯೋಧರನ್ನು ಅಪಹರಿಸಿದ ಉಗ್ರರು
ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿರುವ ಪ್ರಕಾರ ಹೈಬ್ರಿಡ್ ಮಾದರಿಯಲ್ಲಿ (Hybrid Model) ಪಂದ್ಯಗಳನ್ನು ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಭಾರತ ಈಗಾಗಲೇ ಐಸಿಸಿಗೆ ಕಂಡೀಷನ್ ಹಾಕಿದ್ದು, ಇದಕ್ಕೆ ಐಸಿಸಿ ಕೂಡ ಸಮ್ಮತಿಸಿದೆ. ಒಂದು ವೇಳೆ ಹ್ರಬ್ರಿಡ್ ಮಾದರಿಯಲ್ಲಿ ಏನಾದರೂ ಪಂದ್ಯಗಳು ನಡೆದು ಭಾರತ ಫೈನಲ್ ಪ್ರವೇಶಿಸಿದಲ್ಲಿ ಟೂರ್ನಿಯ ಫಿನಾಲೆಯೂ ಪಾಕಿಸ್ತಾನದ ಬದಲಾಗಿ ದುಬೈನಲ್ಲಿ (Dubai) ನಡೆಸಲು ಐಸಿಸಿ ಯೋಜನೆ ಹಾಕಿಕೊಂಡಿದೆ. ಆದರೆ, ಈ ವಿಚಾರ ಪಾಕ್ ಕ್ರಿಕೆಟ್ ಮಂಡಳಿ ಅಪಸ್ವರ ತೆಗೆದಿದ್ದು, ಭಾರತ ಪಾಕ್ ನೆಲದಲ್ಲಿ ಆಡಲೇಬೇಕೆಂದು ಹಠ ಹಿಡಿದಿದೆ. ಅಂತಿಮವಾಗಿ ಐಸಿಸಿ (ICC) ತನ್ನ ನಿರ್ಧಾರವನ್ನು ಪ್ರಕಟಿಸುವವರೆಗೂ ಸ್ಪಷ್ಟ ಚಿತ್ರಣ ಸಿಗುವುದಿಲ್ಲ.
ಈ ಕುರಿತು ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷ ಮಹ್ಸಿನ್ ನಖ್ವಿ, ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ಪಾಕಿಸ್ತಾನಕ್ಕೆ ಬರಲೇಬೇಕು. ಪಾಕಿಸ್ತಾನದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಎಲ್ಲಾ ತಂಡಗಳು ಭಾಗುಯಾಗುತ್ತವೆ. ಆತಿಥ್ಯ ವಹಿಸಲು ನಾವು ಸಿದ್ದರಿದ್ದು, ಈ ಸಂಬಂಧ ಎಲ್ಲಾ ಕ್ರೀಡಾಂಗಣಗಳನ್ನು ನವೀಕರಣ ಮಾಡಲಾಗುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಎಲ್ಲವೂ ಸಿದ್ದವಾಗಿರುತ್ತದೆ ಎಂದು ಮೊಹ್ಸಿನ್ ನಖ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.