Jammu Kashmir| ಇಬ್ಬರು ಯೋಧರನ್ನು ಅಪಹರಿಸಿದ ಉಗ್ರರು

Army

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ಅನಂತ್​ನಾಗ್ (AnantNag) ಜಿಲ್ಲೆಯಲ್ಲಿ ಉಗ್ರರು ಇಬ್ಬರು ಸೇನಾ ಯೋಧರನ್ನು (Army Jawans) ಅಪಹರಿಸಿರುವ (Abduct) ಬಗ್ಗೆ ವರದಿಯಾಗಿದೆ. ಪ್ರಾದೇಶಿಕ ಸೇನೆಯ (Territorial Army) ಯೋಧರನ್ನು ಉಗ್ರರು (Terrorists) ಅಪಹರಿಸಿದ್ದು, ಭದ್ರತಾ ಪಡೆಗಳು (Security Forces) ವಿಶೇಷ ಕಾರ್ಯಾಚರಣೆ ನಡೆಸುತ್ತಿವೆ.

ಸುದ್ದಿ ಮೂಲಗಳ ಪ್ರಕಾರ ಅನಂತ್​ನಾಗ್​ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ (Forest Area) ಉಗ್ರರು ಇಬ್ಬರು ಸೈನಿಕರನ್ನು ಅಪಹರಿಸಿದ್ದು, ಓರ್ವ ಯೋಧ ತಪ್ಪಿಸಿಕೊಂಡು ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿದ್ದಾರೆ. ಇನ್ನೋರ್ವ ಯೋಧನಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಆತನ ಕಾರ್ಯಕ್ಷಮತೆಯನ್ನು ನೋಡಲು ನಿರೀಕ್ಷಿಸುತ್ತೇನೆ… Team India ಆಟಗಾರನಿಗೆ ಅಮೂಲ್ಯ ಸಲಹೆ ನೀಡಿದ ವೆಸ್ಟ್​ ಇಂಡೀಸ್​ ದಿಗ್ಗಜ ಕ್ರಿಕೆಟಿಗ

ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, ಅನಂತ್‌ನಾಗ್‌ನ ಅರಣ್ಯ ಪ್ರದೇಶದಲ್ಲಿ ಇಬ್ಬರು ಟೆರಿಟೋರಿಯಲ್ ಆರ್ಮಿಯ ಯೋಧರಿಬ್ಬರನ್ನು ಅಪಹರಿಸಿದ್ದಾರೆ. , ಆದರೆ ಒಬ್ಬರು ಅದೃಷ್ಟವಶಾತ್ ಮರಳಿದ್ದಾರೆ. ಇನ್ನೋರ್ವ ಯೋಧನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಅಪಹರಣವು ದೊಡ್ಡ ಪ್ರಮಾಣದ ಭದ್ರತಾ ಕಾರ್ಯಾಚರಣೆಯನ್ನು ಹುಟ್ಟುಹಾಕಿದೆ, ಪಡೆಗಳು ನಾಪತ್ತೆಯಾದ ಯೋಧನಿಗಾಗಿ ಅರಣ್ಯ ಪ್ರದೇಶದಾದ್ಯಂತ ಹುಡುಕಾಟ ನಡೆಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

Share This Article

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಬೇಸಿಗೆಯಲ್ಲಿ ಬಿರುಕು ಬಿಟ್ಟ ಪಾದಗಳು ಸುಂದರವಾಗಲು ಇಲ್ಲಿದೆ ಅಲ್ಟಿಮೇಟ್ ಟಿಪ್ಸ್! cracked heels

cracked heels: ಬೇಸಿಗೆಯಲ್ಲಿ ಪಾದಗಳಲ್ಲಿ ಬಿರುಕುಗಳು ಸಾಮಾನ್ಯ ಸಮಸ್ಯೆಯಾಗುತ್ತವೆ. ಸರಿಯಾದ ಆರೈಕೆಯ ಕೊರತೆಯು ಒಣ ಚರ್ಮ…

ಈ ಗಿಡಗಳನ್ನು ನಿಮ್ಮ ಮನೆಯ ಬಳಿ ಬೆಳೆಸಿದರೆ ಸಾಕು ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Mosquitoe

Mosquitoes : ಮಕ್ಕಳು ಮತ್ತು ವಯಸ್ಕರು ಸಾಮಾನ್ಯವಾಗಿ ಮನೆಯಲ್ಲಿ ಎದುರಿಸುವ ದೊಡ್ಡ ಕಿರಿಕಿರಿಗಳಲ್ಲಿ ಸೊಳ್ಳೆಗಳು ಕೂಡ…