

ಬೆಂಗಳೂರು: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಒಂದು ವಾರ ಕಳೆದಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ಹಾಗೂ ಎಡವಟ್ಟಿನಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಈ ಬಾರಿ ಸ್ವರ್ಗ-ನರಕ (hell-Heaven) ಥೀಮ್ನಲ್ಲಿ ಕಾರ್ಯಕ್ರಮ ರೂಪುಗೊಂಡಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಿಗ್ಬಾಸ್ (Bigg Boss) ಮನೆಯಲ್ಲಿ ಕೆಲವು ಸ್ಫರ್ಧಿಗಳು ಮಾಡಿದ ಎಡವಟ್ಟಿನಿಂದಾಗಿ ಇಡೀ ಮನೆ ಶಿಕ್ಷೆಗೆ ಒಳಗಾಗಿರುವ ಘಟನೆ ನಡೆದಿದ್ದು, ಬಿಗ್ಬಾಸ್ (Bigg Boss) ಇತಿಹಾಸದಲ್ಲಿ ನಡೆಯದೇ ಇರುವ ಘನಘೋರ ತಪ್ಪು ಎಂದು ಹೇಳಲಾಗಿದೆ.
ಬಿಗ್ಬಾಸ್ (Bigg Boss) ಶೋ ಎಂದರೆ ಕಟ್ಟುನಿಟ್ಟಾದ ನಿಯಮಗಳು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಬಿಗ್ಬಾಸ್ ಮನೆಗೆ ಸ್ಫರ್ಧಿಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದಲ್ಲಿ ಸ್ಫರ್ಧಿಗಳನ್ನು (Contestants) ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಇದರ ಹೊರತಾಗಿಯೂ ಸ್ಫರ್ಧಿಗಳು ತಪ್ಪು ಮಾಡಿ ಶಿಕ್ಷೆಗೆ ಗುರಿಯಾಗುವ ಹಲವು ಪ್ರಸಂಗಗಳು ನಮ್ಮ ಕಣ್ಣ ಮುಂದಿವೆ. ಇದೀಗ ಬಿಗ್ಬಾಸ್ (Bigg Boss) ಇತಿಹಾಸದಲ್ಲೇ ನಡಯದೆ ಇರುವ ಘನಘೋರ ತಪ್ಪು ನಡೆದು ಹೋಗಿದ್ದು, ಕೆಲವೇ ಕೆಲವು ಸ್ಫರ್ಧಿಗಳು (Contestants) ಮಾಡಿದ ತಪ್ಪಿನಿಂದಾಗಿ ಎಲ್ಲರೂ ನಾಮಿನೇಟ್ (Nominate) ಮಾಡಿ ಬಿಗ್ಬಾಸ್ ಆದೇಶಿಸಿದ್ದಾರೆ.
ದಿನದ ಆರಂಭದಲ್ಲಿ ಬಿಗ್ಬಾಸ್ (Bigg Boss) ನಾಮಿನೇಷನ್ಗೆ ಚಟುವಟಿಕೆ (Activity) ಒಂದನ್ನು ನೀಡಿದ್ದರು. ಈ ಚಟುವಟಿಕೆಯಲ್ಲಿ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ನಾಮಿನೇಟ್ ಆಗಿದ್ದು, ಉಳಿದ ಸ್ಪರ್ಧಿಗಳು (Contestants) ನಿಟ್ಟುಸಿರು ಬಿಟ್ಟಿದ್ದರು. ಆದರೆ, ಸ್ಫರ್ಧಿಗಳಾದ ಮಸನಾ ಸೇರಿದಂತೆ ಕೆಲವರು ಮಾಡಿದ ತಪ್ಪಿನಿಂದಾಗಿ ಕ್ಯಾಪ್ಟನ್ ಸೇರಿದಂತೆ ಮನೆಯ ಪ್ರತಿಯೊಬ್ಬ ಸದಸ್ಯ ನಾಮಿನೇಟ್(Nominate) ಆಗಿದ್ದು, ಬಿಗ್ಬಾಸ್ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗಿದೆ.
ನಿಯಮಗಳ ಪ್ರಕಾರ ಬಿಗ್ಬಾಸ್ನಲ್ಲಿ (Bigg Boss) ಟಾಸ್ಕ್ (Task) ನೀಡುವ ಮುನ್ನ ಬ್ಲೈಂಡ್ಸ್ (Blinds) ಇಳಿಸಲಾಗುತ್ತದೆ. ಬಿಗ್ಬಾಸ್ ನಿಯಮದ ಪ್ರಕಾರ ಯಾರೂ ಹೊರಗೆ ಇಣುಕಿ ನೋಡುವಂತಿಲ್ಲ. ಇದಕ್ಕೆ ಕಾರಣ ಅಲ್ಲಿ ಟಾಸ್ಕ್ಗೆ ಸಿದ್ಧತೆ ಮಾಡುತ್ತಾ ಇರಲಾಗುತ್ತದೆ. ಟಾಸ್ಕ್ ಹೇಗಿರುತ್ತದೆ ಎಂಬುದು ಮೊದಲೇ ಗೊತ್ತಾದರೆ ಸ್ಪರ್ಧಿಗಳು ಮಾನಸಿಕವಾಗಿ ರೆಡಿ ಆಗುತ್ತಾರೆ. ಈ ಕಾರಣದಿಂದ ಇದಕ್ಕೆ ಅನುಮತಿ ಇಲ್ಲ. ಆದರೆ, ಮಾನಸಾ ಸೇರಿದಂತೆ ಕೆಲವರು ಬ್ಲೈಂಡ್ಸ್ನ ಸರಿಸಿ ಹೊರಗೆ ಇಣುಕಿ ನೋಡಿದ್ದಾರೆ. ಈ ವಿಚಾರ ಬಿಗ್ಬಾಸ್ ಗಮನಕ್ಕೆ ಬಂದಿದ್ದು, ಕೆಂಡಾಮಂಡಲರಾಗಿದ್ದಾರೆ.
ಬ್ಲೈಂಡ್ಸ್ (Blinds) ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡುವಂತಿಲ್ಲ ಎಂಬುದು ಮನೆಯ ತುಂಬಾ ಮುಖ್ಯವಾದ ಮೂಲ ನಿಯಮ (Rule). ಈಗಷ್ಟೇ ಆ ನಿಯಮವನ್ನು ಕೆಲ ಸದಸ್ಯರು ಉಲ್ಲಂಘಿಸಿದ್ದಾರೆ. ಈ ವಿಚಾರ ಮನೆಯ ಕ್ಯಾಪ್ಟನ್ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಶೋಚನೀಯ. ನಿಮ್ಮೆಲ್ಲರ ವರ್ತನೆಯಿಂದ ಬಿಗ್ಬಾಸ್ಗೆ (Bigg Boss) ನೋವಾಗಿದೆ. ಬಿಗ್ಬಾಸ್ ನಿಯಮಗಳನ್ನು (Bigg Boss Rules) ಪಾಲಿಸದ ನಿಮಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ. ಈ ಕ್ಷಣದಿಂದ ನಿಮ್ಮೆಲ್ಲರನ್ನೂ ನಾಮಿನೇಟ್ ಮಾಡಲಾಗುತ್ತಿದೆ ಎಂದು ಆದೇಶ ನೀಡಿದರು.
ಬಿಗ್ಬಾಸ್ (Bigg Boss) ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಕೂಡ ನಾಮಿನೇಟ್ ಆಗಿರಲಿಲ್ಲ. ಆದರೆ, ಹಂಸ (Hamsa) ಅವರೇ ನಿಮ್ಮ ಇಮ್ಯೂನಿಟಿಯನ್ನು ಹಿಂಪಡೆದು ನೇರವಾಗಿ ನಾಮಿನೇಟ್ ಮಾಡಿದ್ದೇವೆ. ಇದು ಇತಿಹಾಸ. ಅಭಿನಂದನೆಗಳು ಎಂದು ಬಿಗ್ಬಾಸ್ (Bigg Boss) ಘೋಷಣೆ ಮಾಡಿದರು. ಒಟ್ಟಿನಲ್ಲಿ ಆರಂಭದಲ್ಲೇ ವಿವಾದಗಳಿಂದಲೇ (Controversy) ಸಾಕಷ್ಟು ಸದ್ದು ಮಾಡುತ್ತಿರುವ ಬಿಗ್ಬಾಸ್ (Bigg Boss) ಮುಂದಿನ ದಿನಗಳಲ್ಲಿ ಸ್ಫರ್ಧಿಗಳ ಕಿತ್ತಾಟ ಹಾಗೂ ಎಡವಟ್ಟಿನಿಂದ ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.