Bigg Boss​ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಖ್ಯಾತ ನಟಿ; ಕಾರಣ ಹೀಗಿದೆ

BIGG Boss
Published on

ಚೆನ್ನೈ: ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (Bigg Boss) ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಕಾರ್ಯಕ್ರಮ ವೀಕ್ಷಕರ ಗಮನ ಸೆಳೆಯುವಲ್ಲಿ ಹಿಂದೆ ಬೀಳುತ್ತಿಲ್ಲ. ಅಕ್ಟೋಬರ್​ 06ರಂದು ತಮಿಳಿನ ಬಿಗ್​ಬಾಸ್​ ಆರಂಭವಾಗಿತ್ತು. ಈ ಕಾರ್ಯಕ್ರಮವನ್ನು ಮಕ್ಕಳ್​ ಸೆಲ್ವನ್​ ಖ್ಯಾತಿಯ ವಿಜಯ್​ ಸೇತುಪತಿ (Vijay Sethupathi) ನಡೆಸಿಕೊಡುತ್ತಿದ್ದಾರೆ. ಕನ್ನಡದಂತೆಯೇ ಈ ಬಾರಿ ತಮಿಳಿನಲ್ಲಿಯೂ ಕೂಡ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದೀಗ ಅದರ ಪ್ರಕಾರವೇ ಸ್ಫರ್ಧಿಯೊಬ್ಬರನ್ನು ಮನೆಯಿಂದ ಎಲಿಮಿನೇಟ್ (Eliminate)​ ಮಾಡಲಾಗಿದೆ.

ಅಕ್ಟೋಬರ್​ 06ರಂದು ಶುರುವಾದ ಕಾರ್ಯಕ್ರಮದಲ್ಲಿ ಒಟ್ಟು 18 ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಮನೆ ಪ್ರವೇಶಿಸುವ ಮುನ್ನ ಬಿಜಯ್​ ಸೇತುಪತಿ (Vijay Sethupathi ಸ್ಫರ್ಧಿಗಳ ಲಕೈಯಲ್ಲಿ ಒಂದು ಟ್ರೋಫಿಯನ್ನು ಕೊಟ್ಟು ಕಳುಹಿಸಿದ್ದರು. ಈ ಬಾರಿ ಟ್ವಿಸ್ಟ್​ ಏನೆಂದರೆ ಕಾರ್ಯಕ್ರಮ ಶುರುವಾದ 24 ಗಂಟೆಯಲ್ಲಿ ಎಲಿಮಿನೇಷನ್​ ಆಗುತ್ತದೆ ಎಂದು ನಿರೂಪಕ ಹೇಳಿದ್ದರು. ಅದರಂತೆ ಮೊದಲ ದಿನವೇ ಸ್ಫರ್ಧಿಗಳಿಗೆ ಕಠಿಣ ಟಾಸ್ಕ್​ ನೀಡಲಾಗಿತ್ತು. ಒಂದೇ ದಿನಕ್ಕೆ ಎಲ್ಲರೂ ಸೇರಿ ಒಬ್ಬರನ್ನು ನಾಮಿನೇಟ್ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು (Elimination) ಎನ್ನಲಾಗಿತ್ತು.

Sachana Namidas

ಬಿಗ್​ಬಾಸ್​ ನೀಡಿದ್ದ ಟಾಸ್ಕ್​ನಲ್ಲಿ ನಟಿ ಸಚಾನಾ ನಮಿದಾಸ್ (Sachana Namidas) ಸೋಲುಂಡಿದ್ದು, ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ ಮಹಾರಾಜದಲ್ಲಿ ವಿಜಯ್ ಸೇತುಪತಿ ಅವರ ಮಗಳ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನಟಿ ಸಚಾನಾ ನಮಿದಾಸ್ (Sachana Namidas) ಈ ಬಾರಿಯ ಬಿಗ್​ಬಾಸ್​ (Bigg Boss) ಮನೆಯ ಅತ್ಯಂತ ಕಿರಿಯ ಸ್ಫರ್ಧಿ ಎಂದೇ ಗುರುತಿಸಿಕೊಂಡಿದ್ದರು. ಇವರ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಸಚಾನಾ ಈ ಬಾರಿ ಕಪ್ ಗೆಲ್ಲುತ್ತಾರೆ ಎಂದೇ ಭರವಸೆ ಇಡಲಾಗಿತ್ತು. ಆದರೆ ಮೊದಲ ದಿನವೇ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿ ಸಚಾನಾ ಬಿಗ್​ಬಾಸ್ ಮನೆಗೆ ಹೋದ ಒಂದೇ ದಿನಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ.

ನಿರೂಪಕ ವಿಜಯ್ ಸೇತುಪತಿ (Vijay Sethupathi) ಅವರಿಗೆ ನೀಡಿದ್ದ ಮೂರ್ತಿಯನ್ನು ಅಲ್ಲಿಯೇ ಒಡೆದು ಹಾಕಿ, ಕಣ್ಣೀರು ಹಾಕುತ್ತಾ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಕೇವಲ ಒಂದೇ ದಿನಕ್ಕೆ ಒಬ್ಬ ಆಟಗಾರರನ್ನು ಹೊರಗೆ ಹಾಕಿರುವುದಕ್ಕೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹುಷಃ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸಚಾನಾ ಒಳಗೆ ಬರಬಹುದು ಎಂಬ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net