ಇಂಥ ಪ್ರತಿಭೆಗೆ ನಿಮ್ಮ ತಂಡದಲ್ಲಿ… ಆರ್​​ಸಿಬಿ ಟೀಮ್​ನ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ ನೆಟ್ಟಿಗರು

WhatsApp Image 2024-05-27 at 5.35.48 PM
Published on

ಚೆನ್ನೈ: ನಿನ್ನೆ (ಮೇ.26) ನಡೆದ ಐಪಿಎಲ್ ಫೈನಲ್​ನಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ ತಂಡದ ವಿರುದ್ಧ 8 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿದ ಕೆಕೆಆರ್​, ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿತು. ಇನ್ನು ಎಸ್​ಆರ್​ಎಚ್​ ವಿರುದ್ಧ ಅತ್ಯದ್ಭುತ ಬೌಲಿಂಗ್​ ದಾಳಿ ಮಾಡಿದ ಮಿಚೆಲ್ ಸ್ಟಾರ್ಕ್​​, 3 ಓವರ್​ಗೆ ಕೇವಲ 14 ರನ್​ ಕೊಟ್ಟು, ಎರಡು ವಿಕೆಟ್ ಕಬಳಿಸಿದರು. ಸದ್ಯ ಇದೇ ಇದೀಗ ಆರ್​ಸಿಬಿ ಫ್ರಾಂಚೈಸಿ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಲು ಮುಖ್ಯ ಕಾರಣವಾಗಿದೆ.

ಕಳೆದ ವರ್ಷ ಐಪಿಎಲ್​ ಹರಾಜಿನಲ್ಲಿ ಮಿಚೆಲ್​ ಸ್ಟಾರ್ಕ್‌ರನ್ನು 24 ಕೋಟಿ ರೂ.ಗೆ ಕೆಕೆಆರ್​ ಫ್ರಾಂಚೈಸಿ ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಸ್ಟಾರ್ಕ್​, ಮೊದಲಾರ್ಧದಲ್ಲಿ ಫಾರ್ಮ್‌ಗಾಗಿ ಸ್ವಲ್ಪ ಹೆಣಗಾಡಿದ ಬಳಿಕ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ, ಲೀಗ್​ನಲ್ಲಿ ಕಮ್​ಬ್ಯಾಕ್ ಮಾಡಿದರು. ಇನ್ನು ಈ ಸೀಸನ್​ನಲ್ಲಿ ಮಿಚೆಲ್​ ಎರಡು ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಸ್​ಆರ್​ಎಚ್​ ವಿರುದ್ಧವೇ ಸ್ವೀಕರಿಸಿದರು.

ಸದ್ಯ ಕೆಕೆಆರ್​ ಪರ ಅತ್ಯುತ್ತಮ ಪ್ರದರ್ಶನ ಕೊಟ್ಟು, ಲೀಗ್​ನಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಸೈಎನಿಸಿಕೊಂಡ ಮಿಚೆಲ್ ಸ್ಟಾರ್ಕ್​, 2015ರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ್ದರು. ಆದ್ರೆ, ಅದೇ ಸೀಸನ್​ನ​ ಪ್ಲೇಆಫ್​ನಲ್ಲಿ ಸಿಎಸ್​ಕೆ ವಿರುದ್ಧ ಸೋತ ಚಾಲೆಂಜರ್ಸ್​​, ಲೀಗ್​ನಿಂದ ಹೊರಗುಳಿದರು. 13 ಟಿ20 ಪಂದ್ಯಗಳಲ್ಲಿ ಮಿಚೆಲ್​ 20 ವಿಕೆಟ್​ಗಳನ್ನು ಕಬಳಿಸಿದರು. ಇನ್ನು ಇದೇ ವಿಷಯವನ್ನು ಮುಂದಿಟ್ಟು, ಆರ್​ಸಿಬಿ ಫ್ರಾಂಚೈಸಿ ಕಾಲೆಳೆದ ನೆಟ್ಟಿಗರು, ನಿಮ್ಮದೊಂದೇ ತಂಡಕ್ಕೆ ಸ್ಟಾರ್ಕ್​ ಟ್ರೋಫಿ ಗೆದ್ದು ಕೊಡಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಆರ್​ಸಿಬಿ ತಂಡದ ವಿರುದ್ಧ ವ್ಯಾಪಕ ಟ್ರೋಲ್​ಗಳು ಹರಿದಾಡಿದ್ದು, ಟೀಕಾಕಾರರು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್​ನ ಬೌಲಿಂಗ್​ ಯೂನಿಟ್​ ಅನ್ನು ಮೀಮ್​ನಲ್ಲಿ ಲೇವಡಿ ಮಾಡಿದ್ದಾರೆ. ಇದು ಆರ್​ಸಿಬಿ ಫ್ಯಾನ್ಸ್​ಗಳನ್ನು ಸಹ ತೀವ್ರ ಕೆಂಡಾಮಂಡಲಗೊಳಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net