ಶಶಾಂಕ್​-ಅಶುತೋಷ್​ ಹೋರಾಟ ವ್ಯರ್ಥ; ಮುಂಬೈ ಇಂಡಿಯನ್ಸ್​ಗೆ 9 ರನ್​ಗಳ ಜಯ

Mumbai Indians
Published on

ಮುಲ್ಲನ್​ಪುರ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್​ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 33ನೇ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಮುಂವೈ ಇಂಡಿಯನ್ಸ್ ತಂಡವು ಪಂಜಾಬ್​ ಕಿಂಗ್ಸ್​ ಎದುರು 9 ರನ್​ಗಳ ಜಯ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ ಇಂಡಿಯನ್ಸ್​ ತಂಡವು ಸೂರ್ಯಕುಮಾರ್​ ಯಾದವ್​ (78 ರನ್, 53 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 192ರನ್​ ಗಳಿಸಿತ್ತು. ಪಂಜಾಬ್​ ಪರ ಲಿಯಾಮ್​ ಲಿವಿಂಗ್​ಸ್ಟನ್​ (2-0-16-0), ಅರ್ಷ್​ದೀಪ್​ ಸಿಂಗ್ (3-0-35-0), ಕಗಿಸೋ ರಬಾಡ (4-0-42-1), ಹರ್ಷಲ್​ ಪಟೇಲ್​ (4-0-31-3), ಸ್ಯಾಮ್​ ಕರ್ರನ್​ (4-0-41-2), ಹರ್​ಪ್ರೀತ್​ ಬ್ರಾರ್​ (3-0-21-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

193 ರನ್​ಗಳ ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡವು ಅಶುತೋಷ್​ ಶರ್ಮಾ (61 ರನ್, 28 ಎಸೆತ, 2 ಬೌಂಡರಿ, 7 ಸಿಕ್ಸರ್), ಶಶಾಂಕ್​ ಸಿಂಗ್ (41 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಟ್ಟ ಪ್ರತಿರೋಧದ ಫಲವಾಗಿ ಪಂಜಾಬ್ ಕಿಂಗ್ಸ್ 19.1 ಓವರ್​ಗಳಲ್ಲಿ 183 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು.

ಮುಂಬೈ ಇಂಡಿಯನ್ಸ್ ಪರ ಗೆರಾಲ್ಡ್​ ಕೋಟ್​​ಜೀ (4-0-32-3), ಜಸ್ಪ್ರೀತ್​ ಬುಮ್ರಾ (4-0-21-3), ಆಕಾಶ್​ ಮಧ್ವಾಲ್​ (3.1-0-46-1), ಹಾರ್ದಿಕ್ ಪಾಂಡ್ಯ (4-0-33-1), ಶ್ರೇಯಸ್ಸ ಗೋಪಾಲ್ (2-0-26-1), ರೊಮಾರಿಯೊ ಶೆಫರ್ಡ್​ (2-0-20-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಙ್ರಮುಖ ಪಾತ್ರ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net