ಇಶಾನ್​ ಕಿಶನ್​ಗೆ ಭಾವನಾತ್ಮಕ ವಿದಾಯ ಹೇಳಿದ ಮುಂಬೈ ತಂಡದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ |IPL 2025

IPL 2025
Published on

ಮುಂಬೈ: 2018ರಿಂದ ಮುಂಬೈ ತಂಡದ ಭಾಗವಾಗಿದ್ದ ಸ್ಫೋಟಕ ಬ್ಯಾಟರ್​ ಇಶಾನ್​ ಕಿಶನ್​, ಇತ್ತೀಚಿಗೆ ನಡೆದ IPL 2025ರ ಹರಾಜು ಪ್ರಕ್ರಿಯೆಯಲ್ಲಿ 11.25 ಕೋಟಿ ರೂ.ಗೆ ಸನ್ ರೈಸರ್ಸ್​​ ಹೈದರಾಬಾದ್​ ತಂಡದ ಪಾಲಾಗಿದ್ದಾರೆ. ಈ ಹಿನ್ನೆಲೆ ಮುಂಬೈ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಗೆಳೆಯನಿಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

ಈ ಕುರಿತು ಮುಂಬೈ ತಂಡ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಹಾರ್ದಿಕ್​, ಕಿಶನ್​ ಅನ್ನು ತಂಡದಲ್ಲಿ ಏಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುವುದರ ಮಾಹಿತಿಯನ್ನು ತಿಳಿಸಿದ್ದಾರೆ.

''ಹರಾಜಿನ ಪ್ರಕ್ರಿಯೆಯಲ್ಲಿ ನಾವು ಕಿಶಾನ್​ ಅವರನ್ನು ತಂಡಕ್ಕೆ ಮರಳಿ ಕರೆ ತರುವುದು ಕಷ್ಟ ಎನಿಸಿತು. ಯಾಕೆಂದರೆ ಅವನು ಕ್ರೀಡಾ ಕೌಶಲ್ಯ ಹೊಂದಿದ್ದವನು. ಫಿಟ್​ ಇದ್ದವನು. ನಮಗಿಂತ ಬೇರೆ ತಂಡದವರು ಹೆಚ್ಚಿನ ಮೊತ್ತದಲ್ಲಿ ಖರೀದಿಸುತ್ತಾರೆ ಎಂಬುವುದು ನಮಗೆ ಮೊದಲೇ ತಿಳಿದಿತ್ತು. ಅವರನುಸಾರ ನಮಗೆ ಬಿಡ್​ ಮಾಡಲು ಆಗಲಿಲ್ಲ. ಇದರಿಂದ ಕಿಶನ್​ ಕೈ ತಪ್ಪಿದ ಎಂದು ಹೇಳಿದ ಅವರು, 2018 ರಿಂದ 2024ರ ನಡುವೆ ಕಿಶನ್​ ಇದ್ದ ಸಮಯದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಕಿಶನ್​ ಮುಂಬೈ ತಂಡದ 'ಪಾಕೇಟ್​ ಡೈನಮೋ''' ಎಂದು ಹಾರ್ದಿಕ್​ ನೆನಪಿಸಿಕೊಂಡರು.

''ಕಿಶನ್​ ಯಾವಾಗಲೂ ಡ್ರೇಸ್ಸಿಂಗ್​ ರೂಮ್​ ಲವಲವಿಕೆಯಿಂದ ಇರುತ್ತಿದ್ದರು. ಅವರು ಬಹಳಷ್ಟು ಜನರು ನಗುವಂತೆ ಮಾಡುತ್ತಿದ್ದರು. ಅವರ ಚೇಷ್ಟೇಗಳು ನಮಗೆ ತುಂಬಾ ಇಷ್ಟವಾಗುತ್ತಿದ್ದವು. ನಮ್ಮ ತಂಡಕ್ಕೆ ತುಂಬಾ ಖುಷಿಯನ್ನು ತರುತ್ತಿದ್ದ ಕಿಶಾನ್​ ಮಿಸ್​ ಮಾಡಿಕೊಂಡಿದ್ದೇವೆ. ನಿಮ್ಮನ್ನು ನಮ್ಮ ತಂಡ ಮತ್ತು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಸದಾ ನಿಮ್ಮನ್ನು ಪ್ರೀತಿಸುತ್ತಿದ್ದೇವೆ'' ಎಂದು ಭಾವನಾತ್ಮಕವಾಗಿ ಪಾಂಡ್ಯ ಹೇಳಿದ್ದಾರೆ. ​

ಕೆಲ ದಿನಗಳಿಂದೆ ಕಿಶಾನ್​ ಮುಂಬೈ ತಂಡಕ್ಕೆ ವಿದಾಯ ಹೇಳಿದ್ದರು. ಅಲ್ಲಿ, ನಿಮ್ಮೆಲ್ಲರೊಂದಿಗಿನ ಹಲವು ನೆನಪುಗಳು, ಸಂತೋಷ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿದ್ದಿರಿ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net