37ನೇ ವಯಸ್ಸಿಗೆ ನಟನೆಗೆ ನಿವೃತ್ತಿ ಘೋಷಿಸಿದ 12th Fail​ ನಟ ವಿಕ್ರಾಂತ್​ ಮಾಸ್ಸೆ

blank

ಮುಂಬೈ: ಇತ್ತೀಚಿಗೆ ತೆರೆಕಂಡ ಐಪಿಎಸ್​ ಪೊಲೀಸ್​ ಅಧಿಕಾರಿ ಜೀವನಾಧಾರಿತ ಘಟನೆಯ ಬಯೋಪಿಕ್​ 12th Fail ಸಿನಿಮಾದ ನಟನೆ ಮೂಲಕ, ದೇಶದ ಯುವ ಪೀಳಿಗೆಗೆ ಮತ್ತು ಜನರಿಗೆ ಚಿರಪರಿಚಿತರಾದ ಬಾಲಿವುಡ್​ ನಟ ವಿಕ್ರಾಂತ್​ ಮಾಸ್ಸೆ ಅವರು ತಮ್ಮ 37ನೇ ವಯಸ್ಸಿಗೆ ನಟನೆಗೆ ಗುಡ್​ ಬೈ ಹೇಳುವ ಮೂಲಕ ಧೃಢ ನಿರ್ಧಾರ ಕೈಗೊಂಡಿದ್ದಾರೆ.

ತಮ್ಮ ನಿರ್ಧಾರದ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿ ಬಿಡುಗಡೆಗೊಳ್ಳಲಿರುವ ‘ಜೀರೋ ಸೆ ಸ್ಟಾರ್ಟ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ನಟ ಇದೇ ತಮ್ಮ ಕೊನೆ ಸಿನಿಮಾ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

‘ಮನೆಗೆ ಹಿಂತಿರುಗಲು ಇದು ಒಳ್ಳೆಯ ಸಮಯ ಎಂದು ಅರಿತುಕೊಂಡಿರುವೆ ಎಂದು ಬರೆದಿರುವ ನಟ, ” ಕಳೆದ ಕೆಲ ವರ್ಷಗಳಿಂದ ನನ್ನ ಬೆಂಬಲಕ್ಕೆ ನಿಂತ ನಿಮಗೆ ನನ್ನ ಹೃದಯಸ್ಪರ್ಶಿ ಧನ್ಯವಾದಗಳು. ನಿಮ್ಮ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ನಾನು ಒಬ್ಬ ತಂದೆ, ಗಂಡ, ಮಗ ಮತ್ತು ನಟನಾಗಿ ಮನೆಗೆ ಹಿಂತಿರುವ ಒಳ್ಳೆಯ ಸಮಯ ಇದಾಗಿದೆ. 2025ರ ವರ್ಷ ಕ್ಯಾಮರಾ ಮುಂದೆ ನಿಲ್ಲುವುದು ಅದೇ ಅಂತಿಮ ವರ್ಷವಾಗಲಿದೆ” ಕಳೆದ ಎರಡು ವರ್ಷಗಳಲ್ಲಿ ತೆರೆಕಂಡ ಸಿನಿಮಾಗಳಿಗೆ ಅಭೂತಪೂರ್ವ ಯಶಸ್ಸು ನೀಡಿದ್ದಿರಿ. ನಿಮಗೆ ಮತ್ತೊಮ್ಮೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

37ನೇ ವಯಸ್ಸಿಗೆ ನಟನೆಗೆ ನಿವೃತ್ತಿ ಘೋಷಿಸಿದ 12th Fail​ ನಟ ವಿಕ್ರಾಂತ್​ ಮಾಸ್ಸೆ

ಇದನ್ನೂ ಓದಿ: Yuvanika K.O.A. Award Ceremony | ಯುವನಿಕಾ ಕೆ.ಒ.ಎ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ

ಈ ಸುದ್ದಿಯಿಂದ ತಮ್ಮ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೆಲವರು, ಬ್ರೋ ನಿಮ್ಮಂತ ನಟ ಬಾಲಿವುಡ್​ನಲ್ಲಿ ಯಾರು ಇಲ್ಲ. ನೀವು ಯಶಸ್ಸಿನ ಉತ್ತುಂಗದಲ್ಲಿದ್ದೀರಿ ಇಂತಹ ದಿಢೀರ್​ ನಿರ್ಧಾರ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬಾಲಿವುಡ್​ ಮಂದಿ ಕೂಡ ಇವರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ವಿಕ್ರಾಂತ್​ ಮಾಸ್ಸೆ ವಿಚಾರಕ್ಕೆ ಬರುವುದಾದರೆ, ಆರ್​.ಡಿ ನ್ಯಾಷನಲ್​ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ನಟ. 2007 ರಲ್ಲಿ ತೆರೆಕಂಡ ‘ಧೂಮ್​ ಮಚಾವೋ ಧೂಮ್​’ ದೂರದರ್ಶನ ಸರಣಿಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಧರಮ್​ ವೀರ್​, ಕುಬೂಲ್​ ಹೈ, ಮತ್ತು ಬಾಲಿಕ ವಧು ಸೇರಿದಂತೆ ಆನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

ಬಳಿಕ 2013ರಲ್ಲಿ ರಣವೀರ್​ ಸಿಂಗ್​ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ‘ಲೂಟೆರಾ ಚಿತ್ರದಲ್ಲಿ ಕಾಣಿಸಿಕೊಂಡರು. ನಂತ ವಿವಿಧ ಸಿನಿಮಾಗಳ ಮೂಲಕ ಕಣಿಸಿಕೊಂಡ ನಟ ವಿಕ್ರಾಂತ್​, 2023 ರಲ್ಲಿ ತೆರೆಕಂಡ 12ನೇ ಫೇಲ್​ ಸಿನಿಮಾ ಮೂಲಕ ದೊಡ್ಡ ಹಿಟ್​ ಪಡೆದಿದ್ದರು. ಇನ್ನು 2022ರಲ್ಲಿ ನಟಿ ಶೀತಲ್​ ಠಾಕೂರ್​ ಅವರನ್ನು ವಿವಾಹವಾದ ಇವರಿಗೆ ಒಬ್ಬ ಮಗ ಕೂಡ ಇದ್ದಾನೆ.(ಏಜೆನ್ಸೀಸ್​)

ಅಂದು ಬಾಲಿವುಡ್​ ಅಂಗಳದಿಂದ ಬಾಯ್ಕಾಟ್​! ಇಂದು 1200 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಸ್ಟಾರ್​..

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮನೆ ಮೇಲೆ ಇಡಿ ದಾಳಿ.. ಕಾರಣ ಗೊತ್ತಾ? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​.. | ED Raids

Share This Article

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…

ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಿಕೊಳ್ಳಬಹುದೇ? aloe vera gel benefits

aloe vera gel benefits : ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯ. ಚಳಿಗಾಲದಲ್ಲಿ ಶುಷ್ಕ ಗಾಳಿಯು ನಮ್ಮ…