

ಹೈದರಾಬಾದ್: ಸಮೀಪದ ಇಬ್ರಾಹಿಂ ಪಟ್ಟಣದಲ್ಲಿ ಮಹಿಳಾ ಪೇದೆಯನ್ನು ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಆಕೆಯ ಸಹೊದರ ಕೊಲೆ(Murder) ಮಾಡಿದ್ದಾನೆ. ಇದು ಮರ್ಯಾದಗೇಡು ಹತ್ಯೆಯ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಇಲ್ಲಿನ ಹಯತ್ನಗರದ ಪೊಲೀಸ್ ಠಾಣೆಯ ನಾಗರತ್ನ ಕೊಲೆಯಾದ ಪೇದೆ. ಸೋಮವಾರ(ಡಿ.02) ಠಾಣೆಗೆ ಕರ್ತವ್ಯಕ್ಕೆ ಹಾಜರಿಯಾಗಲು ಕಾರಿನಲ್ಲಿ ಹೋಗುತ್ತಿದ್ದಾಗ, ಬೈಕ್ನಲ್ಲಿ ಬಂದ ಸಹೋದರ ಪ್ರಮೇಶ್ ಕಾಡಿಗೆ ಅಡ್ಡಗಟ್ಟಿ ಸಹೋದರಿ ನಾಗಮಣಿಯನ್ನು ಹಿಂಬಾಲಿಸಿ ಕುಡುಗೋಲಿನಿಂದ ಹತ್ಯೆ ಮಾಡಿದ್ದಾನೆ. ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂ ಪಟ್ಟಣದ ರಾಯ್ಪೋಲ್ - ಮನ್ಯಗಢ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪಾದಚಾರಿಗಳು ಶವವನ್ನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯ್ಪೋಲ್ ಗ್ರಾಮದ ನಾಗಮಣಿ 2020ನೇ ಬ್ಯಾಚ್ನ ಪೊಲೀಸ್ ಪೇದೆಯಾಗಿದ್ದಾರೆ.
ಆಕೆಯ ಶವವನ್ನು ಹೈದರಾಬಾದ್ನ ಸರ್ಕಾರಿ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಹೋದರ ಪ್ರಮೇಶ್ ಪತ್ತೆಗೆ ಮಾಡಲು ಕ್ರಮವಹಿಸಲಾಗುತ್ತದೆ. ಇನ್ನು ನಾಗಮಣಿ ಅಂತರ್ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ವರದಿ ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗಮಣಿ ಮದುವೆಯಾಗಿದ್ದು 10 ತಿಂಗಳ ಹಿಂದೆಯೇ ಪತಿಗೆ ವಿಚ್ಛೇದನ ಪಡೆದಿದ್ದರು. ಬಳಿಕ ಇತ್ತೀಚಿಗೆ ಶ್ರೀಕಾಂತ್ ಎಂಬ ಪೊಲೀಸ್ ಪೇದೆಯನ್ನು(ಅಂತರ್ಜಾತಿ ವಿವಾಹ) ವಿವಾಹವಾಗಿದ್ದರು.ಮನೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಿತರ ಅಯಾಮಗಳಲ್ಲಿ ತನಿಖೆ ಮಾಡಲಾಗುತ್ತದೆ ಎಂದು ಪೊಲಿಸರು ತಿಳಿಸಿದ್ದಾರೆ.(ಏಜೆನ್ಸೀಸ್).