

ಸೂರತ್: ಇಲ್ಲಿನ ತಾಲೂಕು ಅಭಿವೃದ್ಧಿ ಅಧಿಕಾರಿಗೆ ಥಳಿಸಿ, ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡನನ್ನು(Congress leader) ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹುವಾ ತಾಲೂಕಿನ ಕುಮಕೋಟಾರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಹುವಾ ತಾಲೂಕು ಅಭಿವೃದ್ಧಿ ಅಧಿಕಾರಿ ಪ್ರಕಾಶ ಮಹಾಲ ತಮ್ಮ ಕಾರಿನಲ್ಲಿ ಕಚೇರಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಪರಿಮಳ ಪಟೇಲ್ ವಿರುದ್ಧ ದೂರು ದಾಖಲಾಗಿದೆ.
ಇಲ್ಲಿನ ಅನವಲ್ ಮಹುವಾ ರಸ್ತೆಯಲ್ಲಿ ಅಧಿಕಾರಿ ಪ್ರಕಾಶ್ ಮಹಾಲ ಅವರ ಕಾರನ್ನು ತಡೆದ ಕಾಂಗ್ರೆಸ್ ಮುಖಂಡ ಮತ್ತು ತಾಲೂಕು ಪಂಚಾಯತಿ ಸದಸ್ಯ ಪರಿಮಳ ಪಟೇಲ್, ಅವಾಚ್ಯ ಶಬ್ದದಿಂದ ನಿಂದಿದ್ದಾರೆ. ಬಳಿಕ ಪ್ರಕಾಶ ಮಹಾಲ ಅವರು, ಕಾಲನಿಯೊಂದರಲ್ಲಿ ಸರ್ಕಾರಿ ಯೋಜನೆಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಹೊರ ಬಂದಾಗ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಥಳಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ .
ಈ ಕುರಿತು ಪ್ರಕಾಶ ಅವರು ಪರಿಮಳ ಪಟೇಲ್ ವಿರುದ್ಧ, ಭಾರತೀಯ ನ್ಯಾಯಸಂಹಿತೆ 121, 115, 281, 132, 221, 321(3), 352 ಮತ್ತು 333 ಸೆಕ್ಷನ್ಗಳಡಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ, ಸಾರ್ವಜನಿಕ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಯನ್ನು ಥಳಿಸಿ, ಕೆಲಸ ಮಾಡಲು ಬಿಡದೆ ಬೆದರಿಕೆ ಹಾಕಿದ ಆರೋದಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್).