18ನೇ ಆವೃತ್ತಿಯಲ್ಲಿ Dhoni ಆಡ್ತಾರಾ, ಇಲ್ವಾ? ಕೊನೆಗೂ ಮೌನ ಮುರಿದ Mahi

MS Dhoni
Published on

ಚೆನ್ನೈ: 18ನೇ ಆವೃತ್ತಿಯ ಐಪಿಎಲ್​ (IPL) ಆರಂಭವಾಗುವುದ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಕೆಲಸಗಳು ಪ್ರಾರಂಭವಾಗಿದೆ. ಮುನ್ನುಡಿ ಎಂಬಂತೆ ಅಕ್ಟೋಬರ್​ 31ರಂದು ತಂಡಗಳು ರಿಟೇನ್ (Retain)​ ಪಟ್ಟಿ ಬಿಡುಗಡೆ ಮಾಡಲಿದ್ದು, ಇದಾದ ಬಳಿಕ ವರ್ಷಾಂತ್ಯದಲ್ಲಿ ಮೆಗಾ ಹರಾಜು ಕಾರ್ಯಕ್ರಮ ನಡೆಯಲಿದೆ. ರಿಟೇನ್​ಗೆ ಸಂಬಂಧಿಸಿದಂತೆ ಯಾವುದಾದರು ಒಂದು ಹೆಸರು ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ ಎಂದರೆ ಅದು ಮಹೇಂದ್ರ ಸಿಂಗ್​ ಧೋನಿ (Dhoni) ಈ ಬಾರಿಯ ಐಪಿಎಲ್​ನಲ್ಲಿ ಆಡುತ್ತಾರಾ ಇಲ್ಲವಾ ಎಂದು. ಆದರೆ, ಈ ಬಗ್ಗೆ ಇದೀಗ ಸುದ್ದಿಯೊಂದು ಹೊರಬಿದ್ದಿದ್ದು, ಈ ವಿಚಾರವನ್ನು ಕೇಳಿ ಧೋನಿ (Dhoni) ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಈ ಬಗ್ಗೆ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥನ್​ ಹೇಳಿಕೆಯನ್ನು ನೀಡಿದ್ದು, 18ನೇ ಆವೃತ್ತಿಯ ಐಪಿಎಲ್​ ಆಡಲು ಧೋನಿ (Dhoni) ಸಜ್ಜಾಗಿದ್ದು, ಈ ವಿಚಾರವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಧೋನಿ (Dhoni) ರಿಟೇನ್​ (Reatin) ಆಟಗಾರನಾಗಿ ಉಳಿಯುತ್ತಾರಾ ಅಥವಾ ಅನ್​ಕ್ಯಾಪ್ಡ್ ಪ್ಲೇಯರ್​ ಆಗಿ ಕಣಕ್ಕಿಳಿಯಲಿದಾರಾ ಎಂಬ ವಿಚಾರವನ್ನು ಮಾತ್ರ ಬಹಿರಂಗಪಡಿಸಿಲ್ಲ.

IPL CSK

ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಧೋನಿ (Dhoni) ನಾನು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್​ಅನ್ನು ಆನಂದಿಸಬೇಕು ಎಂದುಕೊಂಡಿದ್ದೇನೆ. ನೀವು ಕ್ರಿಕೆಟ್ ಅನ್ನು ವೃತ್ತಿಪರ ಕ್ರೀಡೆಯಂತೆ ಆಡಿದಾಗ, ಅದನ್ನು ಆಟದಂತೆ ಆನಂದಿಸಲು ಕಷ್ಟವಾಗುತ್ತದೆ. ನಾನು ಅದನ್ನು ಮಾಡಲು ಬಯಸುತ್ತೇನೆ. ಅದು ಸುಲಭವಲ್ಲ ಎಂದು ಧೋನಿ ಹೇಳಿದ್ದರು. ಈ ಮೂಲಕ ತಾವು 18ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದಾಗಿ ಮುನ್ಸೂಚನೆ ನೀಡಿದ್ದರು. 

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರವೀಂದ್ರ ಜಡೇಜಾ, ಋತುರಾಜ್​ ಗಾಯಕ್ವಾಡ್​, ಮಥೀಶ ಪತಿರಾನ, ಶಿವಂ ದುಬೆ, ಡೆವೊನ್ ಕಾನ್ವೆ ಮತ್ತು ಸಮೀರ್ ರಿಜ್ವಿ ಅವರನ್ನು ತಂಡ ರಿಟೇನ್​ ಮಾಡಬಹುದು ಎಂದು ಹೇಳಲಾಗಿದೆ. ಐಪಿಎಲ್‌ ಮೆಗಾ ಹರಾಜು ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್‌ 31ರಂದು ಸಂಜೆ 4:30ರ ವೇಳೆಗೆ ಎಲ್ಲಾ ಫ್ರಾಂಚೈಸಿಗಳು ತಂಡದ ರಿಟೇನ್‌ (Retain) ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net