

ಬೆಂಗಳೂರು: ಸಾಕಷ್ಟು ವಿವಾದ ಹಾಗೂ ಸ್ಫರ್ಧಿಗಳ ನಡುವಿನ ಜಗಳದಿಂದಲೇ 11ನೇ ಆವೃತ್ತಿಯ ಬಿಗ್ಬಾಸ್ (Bigg Boss) ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಈಗಾಗಲೇ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಪಡೆದಿದ್ದು, ಶನಿವಾರದ ಸಂಚಿಕೆಯಲ್ಲಿ ಖ್ಯಾತ ನಟ, ನಿರ್ದೇಶಕ ಯೋಗರಾಜ್ ಭಟ್ ಅವರ ಆಗಮಿಸಿ ಸ್ಫರ್ಧಿಗಳ ಜೊತೆ ಸಮಯ ಕಳೆದಿದ್ದರು. ಇಂದಿನ ಸಂಚಿಕೆಯಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ (Srujan Lokesh) ಅವರ ಆಗಮನವಾಗಿದೆ.
ಮಾತೃ ವಿಯೋಗದಿಂದ ಈ ವಾರ ನಿರೂಪಕ ಸುದೀಪ್ ಅವರು ವಾರದ ಕತೆಯನ್ನು ನಡೆಸಿಕೊಡುತ್ತಿಲ್ಲ. ಈ ಕಾರಣಕ್ಕೆ ಬಿಗ್ಬಾಸ್ (Bigg Boss) ಮನೆಗೆ ಶನಿವಾರದ ಸಂಚಿಕೆಯಲ್ಲಿ ಯೋಗರಾಜ್ ಭಟ್ ಅವರನ್ನು ಹಾಗೂ ಭಾನುವಾರದ ಎಪಿಸೋಡ್ನಲ್ಲಿ ಸೃಜನ್ ಲೋಕೇಶ್ ಅವರನ್ನು ಈ ವಾರದ ಪಂಚಾಯ್ತಿ ನಡೆಸಿಕೊಡಲು ವಾಹಿನಿ ಕಳಿಸಿಕೊಟ್ಟಿದ್ದು,ಶನಿವಾರದ ಸಂಚಿಕೆಯಲ್ಲಿ ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಭಾನುವಾರದ ಎಪಿಸೋಡ್ಗೆ ಸೃಜನ್ ಬಂದಿದ್ದು, ಪ್ರೋಮೋ ನೋಡಿ ಪ್ರೇಕ್ಷಕರು ಭರ್ಜರಿ ಮನರಂಜನೆ ಫಿಕ್ಸ್ ಎಂದು ಹೇಳುತ್ತಿದ್ದಾರೆ.
ಈ ಹಿಂದೆ ಸೃಜನ್ ಲೋಕೇಶ್ ಬಿಗ್ಬಾಸ್ (Bigg Boss) ಎರಡನೇ ಆವೃತ್ತಿಯ ರನರ್ಅಪ್ ಆಗಿದ್ದರು. ಇದಲ್ಲದೆ ಕಲರ್ಸ್ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳನ್ನು ನಡೆಸುತ್ತಿದ್ದಾರೆ. 11ನೇ ಆವೃತ್ತಿಯಲ್ಲಿ ಅತಿಥಿಯಾಗಿ ಬಂದಿರುವ ಸೃಜನ್ ಸ್ಫರ್ಧಿ ಹನುಮಂತುಗೆ ಮಾನಸ ಯಾವ ರೀತಿ ಮಾತನಾಡಬೇಕು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಹನುಮಂತ ಅರ್ಧಂಬರ್ಧ ತಿಳಿದುಕೊಂಡು ಆರ್ಡರ್ ಮಾಡಿದರೆ ಸರಿ ಹೋಗುವುದಿಲ್ಲ. ವಿಚಾರವನ್ನು ತಿಳಿದುಕೊಂಡು ಮಾತನಾಡಿದರೆ ಸೂಕ್ತ ಎಂದು ಹೇಳುತ್ತಾರೆ.
ಇದಕ್ಕೆ ಪ್ರತಿಯಾಗಿ ಅರ್ಧಂಬರ್ಧ ವಿಚಾರ ತಿಳಿದು ಮಾತನಾಡಿದಾಗ ಮನೆಯಲ್ಲಿ ಏನಾಗುತ್ತಿದೆ ಎಂದು ಸೃಜನ್ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಹನುಮಂತ ಆ ರೀತಿಯಾದಾಗ ಅವರ ಮಾತು ಕೇಳಿ ಬೇರೆಯವರಿಗೆ ಬೇಜಾರಾಗುತ್ತೆ. ವಿಷಯ ಕರೆಕ್ಟಾಗಿ ಇಲ್ಲಾಂದ್ರೆ. ಗಂಡ ಮಕ್ಕಳಿಗೆ ಅದೇನೋ ಕಡಿಮೆ ಆದಂತೆ ಎಂದು ಹೇಳುತ್ತಾರೆ. ಹೊಡೆಯುವುದಕ್ಕೆ ಹೋಗುವವರ ತರಹ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಾರೆ. ಅದರ ಬದಲು ಮೃದೃವಾಗಿ ಮಾತನಾಡಿ ಎಂದು ಹನುಮಂತ ಹೇಳುತ್ತಾನೆ. ಇದಕ್ಕೆ ಮನೆಮಂದಿ ನಗೆಗಡಲಲ್ಲಿ ತೇಲಿದ್ದು, ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.
ಸದ್ಯ ಬಿಡುಗಡೆಯಾಗಿರುವ ಈ ಪ್ರೋಮೋ ಸಖತ್ ವೈರಲ್ ಆಗಿದ್ದು, ಹನುಮಂತನ ಮಾತಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅನೇಕರು ಮಾನಸಾ ನಡೆಗೆ ಹಲವರು ಕಿಡಿಕಾರಿದ್ದಾರೆ. ಈ ವಾರ ಮಾನಸಾ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.