11ನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿಗೆ ವಿಶೇಷ ಉಡುಗೊರೆ ನೀಡಿದ ಧೋನಿ!

dhoni web
Published on

ರಾಂಚಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸಾಕ್ಷಿ ದಂಪತಿಗೆ ಭಾನುವಾರ 11ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಧೋನಿ ಪತ್ನಿಗೆ ಹಳೆಯ ಮಾದರಿಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ನೀಲಿ-ಬಿಳಿ ಬಣ್ಣದ ಈ ವಿಂಟೇಜ್ ಕಾರಿನ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಾಕ್ಷಿ, ‘ಆನಿವರ್ಸರಿ ಗ್‌ಟಿಗೆ ಥ್ಯಾಂಕ್‌ಯೂ’ ಎಂದು ಬರೆದುಕೊಂಡಿದ್ದಾರೆ. 2010ರಲ್ಲಿ ಡೆಹ್ರಾಡೂನ್‌ನಲ್ಲಿ ಧೋನಿ-ಸಾಕ್ಷಿ ವಿವಾಹವಾಗಿದ್ದರು.

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸಿದ ಬಳಿಕ ಬಿಡುವಿನಲ್ಲಿರುವ ಎಂಎಸ್ ಧೋನಿ, ಸಿಎಸ್‌ಕೆ ಕೂಡ ಟ್ವಿಟರ್‌ನಲ್ಲಿ ವಿಶೇಷ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದೆ. ಕಿಂಗ್ ಮತ್ತು ಕ್ವೀನ್‌ಗೆ ಸೂಪರ್ ಹ್ಯಾಪಿ ಆನಿವರ್ಸರಿ ಎಂದು ಸಿಎಸ್‌ಕೆ ಟ್ವೀಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net