ಮದುವೆ ಬಗ್ಗೆ ಮಾತನಾಡಿದ ನ್ಯಾಷನಲ್ ಕ್ರಷ್ ಸ್ಮೃತಿ ಮಂದಾನ; ಹೇಗಿರುತ್ತೆ ಗೊತ್ತಾ ಅವರ ವಿವಾಹ?

smruthi
Published on

ನವದೆಹಲಿ: ಅಭಿಮಾನಿಗಳ ಬಾಯಿಯಲ್ಲಿ ನ್ಯಾಷನಲ್ ಕ್ರಷ್ ಎಂದೇ ಕರೆಯಿಸಿಕೊಳ್ಳುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಓಪನರ್ ಸ್ಮೃತಿ ಮಂದಾನ ಕೊನೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಲವ್​ ಮ್ಯಾರೇಜ್ ಆಗ್ತೀರಾ ಅಥವಾ ಅರೆಂಜ್ ಮ್ಯಾರೇಜ್ ಆಗ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.


ಬ್ಯಾಟ್ ಹಿಡಿದು ಒಳ್ಳೊಳ್ಳೆ ಶಾಟ್ ಹೊಡೆಯುವ ಸ್ಮೃತಿ ಭಾರತದ ಅನೇಕ ಜನರ ನಿದ್ದೆ ಕೆಡಿಸಿರುವುದಂತು ಸತ್ಯ. ಸೋಶಿಯಲ್ ಮೀಡಿಯಾಗಳಲ್ಲೂ ಆ್ಯಕ್ಟಿವ್ ಇರುವ ಅವರು ಆಗಾಗ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರಿಸುತ್ತಿರುತ್ತಾರೆ. ಅದೇ ರೀತಿ ಇತ್ತೀಚೆಗೆ ಅಭಿಮಾನಿಯೊಬ್ಬರು ಸ್ಮೃತಿ ಅವರಿಗೆ ನೀವು ಅರೆಂಜ್ ಮ್ಯಾರೇಜ್ ಆಗ್ತೀರಾ ಅಥವಾ ಲವ್ ಮ್ಯಾರೇಜ್ ಆಗ್ತೀರಾ ಎನ್ನುವ ಪ್ರಶ್ನೆ ಕೇಳಿದ್ದರು.


ಅಭಿಮಾನಿಯ ಈ ಪ್ರಶ್ನೆಗೆ ಸ್ಮೃತಿ ಉತ್ತರಿಸಿದ್ದಾರೆ. ಅರೆಂಜ್ ಅಲ್ಲ, ಲವ್ ಅಲ್ಲ ಬದಲಾಗಿ ಲವ್​-ರೇಂಜಡ್ ಮದುವೆ ಆಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅದರ ಮುಂದೆ ನಗುವ ಒಂದು ಸ್ಮೈಲಿಯನ್ನೂ ಹಾಕಿದ್ದಾರೆ. ಅವರು ತಮಾಷೆಯಾಗಿ ಹೇಳಿರುವ ಈ ಉತ್ತರವನ್ನು ಅಭಿಮಾನಿಗಳಂತೂ ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದಾರೆ. ಅವರು ಲವ್ ಮಾಡಿ ಅದಾದ ಮೇಲೆ ಕುಟುಂಬವನ್ನು ಒಪ್ಪಿಸಿ ಅದನ್ನೇ ಅರೆಂಜ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net