ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

photo
Published on

ರಾಯ್ಪುರ: ಅಪ್ಪ ಅಮ್ಮ ಮನೆಯಲ್ಲಿ ಇಲ್ಲದ ಸಮಯ ನೋಡಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚತ್ತೀಸ್​ಗಢದ ಭಿಲೈನ ಪ್ರದೇಶದಲ್ಲಿ ನಡೆದಿದೆ. ಸಾಯುವುದಕ್ಕೂ ಮುನ್ನ ಒಂದು ನೋಟ್​ಬುಕ್​ ತುಂಬ ಐ ಹೇಟ್ ಮೈ ಲೈಫ್ ಎಂದು ಬರೆದಿಟ್ಟಿರುವುದು ಕಂಡುಬಂದಿದೆ.

9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚಾಂದಿನಿ ಹೆಸರಿನ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವಾಕೆ. ಆಕೆಯ ತಂದೆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂಬಂಧಿಯೊಬ್ಬರನ್ನು ನೋಡಲು ಹೋಗಿದ್ದರಂತೆ. ಆ ವೇಳೆ ಬಾಲಕಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಅದನ್ನು ಗಮನಿಸಿದ ಸ್ಥಳೀಯರು ಆಕೆಯ ತಂದೆ ತಾಯಿ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಚಾಂದಿನಿ ರೂಮಿನಲ್ಲಿ ಪರಿಶೀಲನೆ ನಡೆಸಿದಾಗ ಒಂದು ನೋಟ್ ಬುಕ್ ಸಿಕ್ಕಿದೆ. ಅದರಲ್ಲಿ ಆಕೆ ಸುಮಾರು 50 ಪುಟಗಳಲ್ಲಿ ಐ ಹೇಟ್ ಮೈ ಲೈಪ್ ಎಂದು ಬರೆದಿಟ್ಟಿದ್ದಾಳೆ. ಕೆಲ ಪುಟಗಳಲ್ಲಿ ಒಬ್ಬ ಹುಡುಗ ಹಾಗೂ ಹುಡುಗಿ ಒಟ್ಟಾಗಿ ಕುಳಿತಿರುವ ಚಿತ್ರ ಬರೆದಿದ್ದಾಳೆ. ಇನ್ನೊಂದು ಪುಟದಲ್ಲಿ ಒಬ್ಬ ಹುಡುಕಿ ಒಬ್ಬಂಟಿಯಾಗಿ ಕುಳಿತಿರುವ ಫೋಟೋ ಬರೆದಿದ್ದಾಳೆ. ಆಕೆ ಆ ರೀತಿ ಬರೆದಿರುವುದಕ್ಕೂ ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net