More

    VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

    ಮ್ಯೂನಿಚ್: ಪೋರ್ಚುಗಲ್ ಸೂಪರ್‌ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಅವರು ಗೋಲುಗಳ ಸರದಾರ. ಅಂತಾರಾಷ್ಟ್ರೀಯ ಫುಟ್‌ಬಾಲ್ ಮತ್ತು ಕ್ಲಬ್ ಫುಟ್‌ಬಾಲ್‌ಗಳಲ್ಲಿ ಕಳೆದ 20 ವರ್ಷಗಳಲ್ಲಿ 700ಕ್ಕೂ ಅಧಿಕ ಗೋಲು ಸಿಡಿಸಿದ್ದಾರೆ. ಅವರ ಈ ಒಂದೊಂದು ಗೋಲು ಕೂಡ ಆಕರ್ಷಕವಾದುದು. ಇದೀಗ ಯುರೋ ಕಪ್‌ನಲ್ಲಿ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಸಿರುವ ಗೋಲೊಂದು ಎಲ್ಲರ ಗಮನಸೆಳೆದಿದೆ. 36ನೇ ವಯಸ್ಸಿನಲ್ಲೂ ಚಿರತೆಯಂತೆ ಎದುರಾಳಿ ಕೋಟೆಗೆ ನುಗ್ಗಿ ಗೋಲು ಬಾರಿಸುವ ಅವರ ಚಕಚಕ್ಯತೆ ಮಾಸಿಲ್ಲ ಎಂಬುದಕ್ಕೆ ಈ ಗೋಲು ಸಾಕ್ಷಿಯಾಗಿ ನಿಂತಿದೆ.

    ಶನಿವಾರ ನಡೆದ ಜರ್ಮನಿ ವಿರುದ್ಧದ ಪಂದ್ಯದ 15ನೇ ನಿಮಿಷದಲ್ಲಿ ರೊನಾಲ್ಡೊ ಪೋರ್ಚುಗಲ್ ತಂಡದ ಗೋಲು ಪೆಟ್ಟಿಗೆಯ ಬಳಿ ಇದ್ದ ಚೆಂಡನ್ನು ಏಕಾಂಗಿಯಾಗಿ ತೆಗೆದುಕೊಂಡು ಹೋಗಿ ಎದುರಾಳಿಯ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸಿದ್ದರು. ಇದಕ್ಕಾಗಿ ಅವರು 92 ಮೀಟರ್ ದೂರವನ್ನು ಕೇವಲ 14 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ಶೇನ್ ವಾರ್ನ್‌ಗೆ ಸ್ಪಿನ್ ಬೌಲಿಂಗ್​ ಬಗ್ಗೆ ಪಾಠ ಮಾಡಿ ಟ್ರೋಲ್ ಆದ ಕ್ರಿಕೆಟ್ ಅಭಿಮಾನಿ!

    ಆಸಕ್ತಿದಾಯಕವೆಂದರೆ, ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ರೊನಾಲ್ಡೊ ವೃತ್ತಿಜೀವನದಲ್ಲಿ ಸಿಡಿಸಿದ ಮೊಟ್ಟಮೊದಲ ಗೋಲು ಇದಾಗಿದೆ. ಆದರೆ ಪಂದ್ಯದಲ್ಲಿ ರೊನಾಲ್ಡೊ ಅವರ ಈ ಸಾಹಸದ ಹೊರತಾಗಿಯೂ ತಮ್ಮ ತಂಡದ ಆಟಗಾರರು ಮಾಡಿದ 2 ಸ್ವಗೋಲಿನ ಪ್ರಮಾದದಿಂದಾಗಿ ಪೋರ್ಚುಗಲ್ ತಂಡ 2-4ರಿಂದ ಸೋಲು ಕಂಡಿತು.

    ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್‌ಗೆ ಫ್ಲೈಯಿಂಗ್ ಸಿಖ್ ಹೆಸರು ನೀಡಿದ್ದು ಯಾರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts