

ನವದೆಹಲಿ: ಟೀಮ್ ಇಂಡಿಯಾದ ಅದ್ಭುತ ವೇಗಿ ಮೊಹಮ್ಮದ್ ಶಮಿ, ಕಳೆದ ಒಂದು ವರ್ಷದಿಂದ ಇಂಜುರಿಯ ಹಿನ್ನಲೆ ಮೈದಾನದಿಂದ ದೂರ ಉಳಿದಿದ್ದಾರೆ. ಸದ್ಯ ರಿಲಾಕ್ಸ್ ಮೂಡನಲ್ಲಿರುವ ಶಮಿ ಇದೀಗ ಹೊಸ ಲುಕ್ನಿಂದ ಸಖತ್ ಟ್ರೆಂಡ್ ಆಗುತ್ತಿದ್ದಾರೆ. ಕಳೆದ ಬಾರಿ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಅದನ್ನು ಹೊರತುಪಡಿಸಿದರೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳಿಂದ ನೆಟ್ಟಿಗರ ಪ್ರಶ್ನೆಗಳಿಗೆ ಗುರಿಯಾಗಿದ್ದರು. ಆದ್ರೆ, ಈಗ ಹೊಸ ಹೇರ್ ಸ್ಟೈಲ್ನಿಂದ ಮಿಂಚುತ್ತಿರುವ ಸ್ಟಾರ್ ಕ್ರಿಕೆಟಿಗನನ್ನು ಕಂಡು ಅಚ್ಚರಿಗೆ ಒಳಗಾಗಿರುವ ಫ್ಯಾನ್ಸ್, ಇದು ಹೇಗೆ ಸಾಧ್ಯೆ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಗೊಜನೂರ ಗ್ರಾಪಂನಲ್ಲಿದೆ ಮೀಟಿಂಗ್ ಹಾಲ್, ಎಚ್ಡಿ ಟಿ.ವಿ!
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಅವರ ಹೇರ್ ಸ್ಟೈಲಿಂಗ್ ಮಾಡುವ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಂ ಹಕೀಂ ಅವರೇ ಇದೀಗ ಶಮಿ ತಲೆಯಲ್ಲಿ ಚಿಗುರೊಡೆದ ಕೂದಲಿನ ರಾಶಿಗೆ ಕಾರಣರಾಗಿದ್ದಾರೆ. ಅಸಲಿಗೆ ಕಳೆದ ವರ್ಷ ಬೋಳು ತಲೆಯಲ್ಲಿದ್ದ ಶಮಿಗೆ ಹೇಗೆ ಇಷ್ಟೊಂದು ಕೂದಲು ಬರಲು ಸಾಧ್ಯ? ಇದೇನು ವಿಗ್ ಹಾಕಿರುವುದಾ? ಎಂದು ಒಂದಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಮಿ ಅವರ ಹೊಸ ಲುಕ್ನ ಫೋಟೋಗಳ ಕೆಳೆಗೆ ಕಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.
ಒಂದೆಡೆ ಫೋಟೋಗಳನ್ನು ನೋಡಿದಾಗ ಖುಷಿಯಾದರೂ ಮತ್ತೊಂದೆಡೆ ಕೆಲವರಿಗೆ ಭಾರೀ ಗೊಂದಲ ಸೃಷ್ಟಿಯಾಗಿದೆ. ವರದಿಗಳ ಪ್ರಕಾರ, ಶಮಿ ಅವರಿಗೆ ಬೊಕ್ಕ ತಲೆಯಿದದ್ದು ನಿಜ. ಆದ್ರೆ, ಕೆಲವು ತಿಂಗಳ ಹಿಂದೆ ಕೂದಲಿನ ಬೆಳವಣಿಗೆಗಾಗಿ ಅವರು ಕಸಿ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಮುಂಚೆಯೇ ತಲೆಯ ಒಂದು ಭಾಗದಲ್ಲಿ ಶಮಿಗೆ ಕೂದಲಿತ್ತು. ಮಧ್ಯ ಭಾಗದಲ್ಲಿ ಮಾತ್ರ ಕೊಂಚ ಬೋಳು ಆವರಿಸಿತ್ತು. ಕೇಶರಾಶಿ ಬೆಳೆದ ಹಿನ್ನಲೆ ಇದೀಗ ಹೆಸರಾಂತ ಹೇರ್ ಸ್ಟೈಲಿಸ್ಟ್ ಆಲಿಂ ಹಕೀಂ ಅವರ ಬಳಿ ತಮ್ಮ ಕೂದಲಿಗೆ ಕತ್ತರಿ ಹಾಕಿಸಿ, ಹೊಸ ಲುಕ್ನಲ್ಲಿ ಶಮಿ ಮಿಂಚಿದ್ದಾರೆ. ಈ ಮೂರು ಫೋಟೋಗಳು ಸದ್ಯ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ,(ಏಜೆನ್ಸೀಸ್).